Select Page

Advertisement

ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ಶ್ರೀಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ಶ್ರೀಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಅಥಣಿ : ಇಂದಿನ ಜಂಜಾಟದ ಬದುಕಿಗೆ ಮನುಷ್ಯ ತನ್ನ ಮಾನಸಿಕ ನೆಮ್ಮದೆ ಹಾಳುಮಾಡಿಕೊಳ್ಳುತ್ತಿದ್ದಾನೆ. ಆದರೆ ಇದರಿಂದ ದೂರ ಬರಲು ಬಸವ ಪುರಾಣ ಆಲಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಬದುಕಿನಲ್ಲಿ ಉತ್ಸಾಹ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಉಪ್ಪಿನ ಬೆಟಗೇರಿಯ ಶ್ರೀಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ  ನುಡಿದರು.

ಸುಕ್ಷೇತ್ರ ಗಚ್ಚಿನಮಠದಲ್ಲಿ ಮಹಾತಪಸ್ವಿ  ಶ್ರೀ ಮುರುಘೇಂದ್ರ ಶಿವಯೋಗಿಗಳ  ಲಿಂಗೈಕ್ಯ ಸ್ಮರಣೋತ್ಸವ  ಅಂಗವಾಗಿ ಹಮ್ಮಿಕೊಂಡಿರುವ ಬಸವ ಪುರಾಣ  ಕಾರ್ಯಕ್ರಮದಲ್ಲಿ ಮಾತನಾಡಿ  ಬಸವಾದಿ ಶರಣರು ನೀಡಿದ ಸಂದೇಶಗಳು ನಮ್ಮ ಜೀವನದ ದಾರಿ ದೀಪಗಳು. ಅವುಗಳನ್ನು ಕೇಳುವುದರಿಂದ ಬದುಕು ಸುಂದರವಾಗುತ್ತದೆ. ಪುರಾಣ ಕೇಳುವುದು ಮತ್ತು ಹೇಳುವುದು ಒಂದು ತಪಸ್ಸು. ಅದರಲ್ಲಿ  ಬಸವಪುರಾಣ ಕೇಳುವುದು ಎಂದರೆ ಜೀವನವೇ ಧನ್ಯ. ಬಸವ ಪುರಾಣವನ್ನು ದೇಶದ ಅನೇಕ ಭಾಷೆಗಳಲ್ಲಿ  ಅನೇಕ ಕವಿಗಳು ಬಸವಣ್ಣನ ಕಾರ್ಯವನ್ನು ಕೊಂಡಾಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ  ವಚನ ಕ್ರಾಂತಿ, ಸಮಾನತೆ, ಕಾಯಕ ಮಂತ್ರ, ಅನುಭವ ಮಂಟಪ  ಅನೇಕ ವಿಚಾರಗಳ ಬಗ್ಗೆ 13ನೇ ಶತಮಾನದಲ್ಲಿ  ಭೀಮ ಕವಿ  ಬಸವ ಪುರಾಣವನ್ನು ಕನ್ನಡದಲ್ಲಿ ಮೊದಲ ಬಾರಿಗೆ ರಚಿಸಿದರು ಎಂಬ ಇತಿಹಾಸವಿದೆ ಎಂದು ಹೇಳಿದರು.

ಪ್ರಪಂಚದಲ್ಲಿ ಇರುವ ಪುರಾತನ ಧರ್ಮವೇ ಶಿವ ಧರ್ಮ, ಆದ್ದರಿಂದಲೇ ನಾವು ಇಂದಿಗೂ ದೇಶ-ವಿದೇಶಗಳಲ್ಲಿ  ಶಿವ ಮಂದಿರಗಳು ಇರುವುದನ್ನು ಕಾಣುತ್ತೇವೆ. ನಾಡಿನ ಅನೇಕ ಮಹಾತ್ಮರು, ಬಸವಾದಿ ಶರಣರು, ಶಿವಯೋಗಿಗಳು ಶಿವಲಿಂಗ ಆರಾಧಕರಾಗಿದ್ದರು. ಇಷ್ಟಲಿಂಗ ಪೂಜೆಯ ಮೂಲಕ ಏಕಾಗ್ರತೆ ಸಾಧಿಸಿ ತಮ್ಮಲ್ಲಿಯೇ ದೈವತ್ವವನ್ನು  ಕಾಣುತ್ತಿದ್ದರು. ಅಂತಹ ಮಹಾತ್ಮರ,  ಬಸವಾದಿ ಶರಣರ ಸಂದೇಶಗಳು  ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ. ಅವುಗಳನ್ನು ಆಸ್ವಾದಿಸುವ ಮೂಲಕ  ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿವಬಸವ ಸ್ವಾಮೀಜಿ ಮಾತನಾಡಿದರು. ಈ ವೇಳೆ ಜನವಾಡ ದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಪ್ಪಳದ ಸಿದ್ದಲಿಂಗ ದೇವರು, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!