
ಅಥಣಿ ಜಿಲ್ಲೆಯಾಗಲು ಶಿವಯೋಗಿಗಳ ಮೊರೆ ಹೊದ ಯುವಕ

ಅಥಣಿ : ಬೆಳಗಾವಿ ಜಿಲ್ಲಾ ವಿಭಜನೆಯಾಗಿ ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ಕೂಗು ಜೋರಾಗಿದ್ದು, ಈಗ ಯುವಕನೋರ್ವ ಬಾಳೆ ಹಣ್ಣಿನ ಮೇಲೆ ಅಥಣಿ ಜಿಲ್ಲಾಕೇಂದ್ರ ಆಗುವಂತೆ ಬರೆದು ಶಿವಯೋಗಿಗಳಿಗೆ ಅರ್ಪಿಸಿರುವ ವೀಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಮಹಾತಪಸ್ವಿ ಅಥಣಿ ಶಿವಯೋಗಿಗಳ 101 ನೇ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಜರುಗಿದ ರಥೋತ್ಸವದಲ್ಲಿ, ಬಾಳೆ ಹಣ್ಣಿನ ಮೇಲೆ ಅಥಣಿ ಜಿಲ್ಲೆಯಾಗಲೆಂದು ಬರೆದು ಯುವಕ ಶಶಿಧರ್ ಬರ್ಲಿ ದೇವರಿಗೆ ಅರ್ಪಣೆ ಮಾಡಿದ್ದಾರೆ. ವಿಭಿನ್ನ ರೀತಿಯಲ್ಲಿ ಯುವಕರು ಹರಕೆ ಕಟ್ಟಿಕೊಳ್ಳುತ್ತಿದ್ದು ಅಥಣಿ ಜಿಲ್ಲಾ ಕೇಂದ್ರಕ್ಕೆ ಆಗ್ರಹ ಹೆಚ್ಚಾಗುತ್ತಿದೆ.
ಪೋಟೋ : ಅಥಣಿ ಜಿಲ್ಲಾಕೇಂದ್ರದ ಕನಸು ಈಡೇರಿಸುವಂತೆ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ ಅಥಣಿ ಜಿಲ್ಲೆ ಎಂದು ಬರೆದು ಹರಕೆ ಇಟ್ಟ ಯುವಕ.