![ಕನ್ನಡ ಬಿಗ್ ಬಾಸ್ ನಿಂದ ಐಶ್ವರ್ಯ ಸಿಂಧೋಗಿ ಔಟ್…?](https://belagavivoice.com/wp-content/uploads/2024/12/images-75-150x150.jpeg)
BREAKING : ಮಂಗಳೂರಿನಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ
![BREAKING : ಮಂಗಳೂರಿನಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ](https://belagavivoice.com/wp-content/uploads/2022/07/IMG-20220728-WA0141.jpg)
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಯುವಕ ಪ್ರವೀಣ್ ಕೊಲೆ ಬೆನ್ನಲ್ಲೇ ಆಕ್ರೋಶ ಕುದಿಯುತ್ತಿದ್ದ ಕರಾವಳಿ ಜಿಲ್ಲೆಯಲ್ಲಿ, ಸಧ್ಯ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದ್ದು ಫಾಜಿಲ್ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಮಂಗಳೂರು ನಗರದ ಹೊರವಲಯದ ಸುರತ್ಕಲ್ ನಲ್ಲಿನ ಮೊಬೈಲ್ ಅಂಗಡಿ ಬಳಿ ಯುವಕ ಫಾಜಿಲ್ ಎಂಬುವವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಮೊನ್ನೆಯಷ್ಟೇ ಬಿಜೆಪಿ ಯುವ ಮೋರ್ಚಾ ಸದಸ್ಯ ಹಾಗೂ ಯುವ ನಾಯಕ ಪ್ರವೀಣ್ ಎಂಬುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಇದರಿಂದ ಇಡೀ ದಕ್ಷಿಣ ಕನ್ನಡ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಧ್ಯ ಮುಸ್ಲಿಂ ಯುವಕನ ಕೊಲೆಯಾಗಿದ್ದು ಮತ್ತೊಮ್ಮೆ ಕರಾವಳಿ ಕೋಮು ದಳ್ಳುರಿಗೆ ಸಾಕ್ಷಿಯಾಗುತ್ತದೆಯಾ ಎಂಬುದು ಸಧ್ಯದ ಪ್ರಶ್ನೆ.