Select Page

BELAGAVI : ಯುವತಿಯ ಪೋಟೋ ಬಳಸಿ ಲಕ್ಷಾಂತರ ರೂ ದೋಚಿದ್ದ ಕಿಲಾಡಿ ಬಂಧನ

BELAGAVI : ಯುವತಿಯ ಪೋಟೋ ಬಳಸಿ ಲಕ್ಷಾಂತರ ರೂ ದೋಚಿದ್ದ ಕಿಲಾಡಿ ಬಂಧನ

ಬೆಳಗಾವಿ : ಕುಂದಾನಗರಿ ಯುವತಿಯ ಪೋಟೋ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಯುವಕರನ್ನು ಬೀಳಿಸಿಕೊಂಡು ಲಕ್ಷಾಂತರ ರೂ ವಸೂಲಿ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ಅಪ್ಲೋಡ್ ಮಾಡುವ ಯುವತಿಯರೇ ಹುಷಾರ್. ಹೆಚ್ಚು ಲೈಕ್ ಬರುತ್ತವೆ, ಕಮೆಂಟ್ ಬರುತ್ತವೆ ಎಂದು ಎಂದು ತಮ್ಮ ಎಲ್ಲ ಫೋಟೋಗಳನ್ನ ಅಪ್ಲೋಡ್ ಮಾಡಿದರೆ ನಿಮ್ಮ ಪೋಟೊಗಳನ್ನೇ ಬಳಸಿಕೊಂಡು ಹಣ ಮಾಡುವ ಖದೀಮನ ಖತರ್ನಾಕ್ ಸ್ಟೋರಿಗೆ ಬೆಳಗಾವಿ ಸಿಇಎನ್ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದಾರೆ‌.

ಒಂದೇ ಯುವತಿಯ ಪೋಟೊ ಬಳಸಿಕೊಂಡು ಇಪ್ಪತ್ತು ಲಕ್ಷ ಎಗರಿಸಿದ್ದಾನೆ. ಈ ಖತರನಾಕ್ ಯುವಕನ ಹುಚ್ಚಾಟಕ್ಕೆ ಫೇಸ್‌ಬುಕ್, ಇನ್ ಸ್ಟ್ರಾಗ್ರಾಂ ಬಳಸುವ ಯುವತಿಯರೇ ಬೆಚ್ಚಿ ಬಿದ್ದಿದ್ದಾರೆ‌.ಬೆಳಗಾವಿಯ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಮಾಡಿ ಹಣ ಪೀಕುತ್ತಿದ್ದ ಯುವಕನ ಬಂಧಿಸಿದ್ದಾರೆ.

ಎಂ‌.ಸ್ನೇಹಾ.ಎಂ ಹೆಸರಿನಲ್ಲಿ ಫೇಕ್ ಐಡಿ ಮಾಡಿದ್ದ ಮಹಾಂತೇಶ್ ಮೂಡಸೆ ಬಂಧಿತ ಆರೋಪಿ. ಈತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ನಿವಾಸಿಯಾಗಿದ್ದಾನೆ. ಅಲ್ಲದೇ,ಮಹಾಂತೇಶ್ ಮೂಡಸೆ ಪಿಎಸ್‌ಐ ದೈಹಿಕ ಪರೀಕ್ಷೆ ಕೂಡ ಪಾಸ್ ಆಗಿದ್ದನ್ನು. ಧಾರವಾಡದಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಾಂತೇಶ್ ಯುವತಿ ಹೆಸರಲ್ಲಿ ಹಣ ವಸೂಲಿ ಮಾಡಿ ಗೋವಾಕ್ಕೆ ತೆರಳಿ ಎಂಜಾಯ್ ಕೂಡ ಮಾಡುತ್ತಿದ್ದವನನ್ನು ಸಿಇಎನ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಯುವತಿಯೊಬ್ಬರ ಪೋಟೊಗಳನ್ನ ಫೇಸ್ ಬುಕ್‌ನಲ್ಲಿ ಡೌನ್‌ಲೋಡ್ ಮಾಡಿದ್ದ ಮಹಾಂತೇಶ್ ಬೆಳಗಾವಿ ನಗರದ ಯುವತಿ ಪೋಟೊ ಬಳಸಿ ಫೇಕ್ ಅಕೌಂಟ್ ಮಾಡಿದ್ದ. ಆ ಯುವತಿ ಪೋಟೊಕ್ಕೆ ಸ್ನೇಹಾ ಹೆಸರು ಹಾಕಿ ಅಕೌಂಟ್ ಮಾಡಿದ್ದ ಕಿರಾತಕ  ಕಳೆದ ಮೂರು ವರ್ಷದ ಹಿಂದೆ ಫೇಕ್ ಐಡಿ ಮಾಡಿ 20ಲಕ್ಷ ವಸೂಲಿ ಮಾಡಿದ್ದಾನೆ.

ಫೇಸ್‌ಬುಕ್ ಮತ್ತು ಇನ್ ಸ್ಟ್ರಾಗ್ರಾಂ ನಲ್ಲಿ ಯುವಕರೊಂದಿಗೆ ಸ್ನೇಹ ಮಾಡಿಕೊಂಡು ಯುವಕರಿಗೆ ತಾನೂ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್ ಪಡೆಯುತ್ತಿದ್ದ ಮಹಾಂತೇಶ್. ಹೀಗೆ ನಂಬರ್ ಪಡೆದು ನಂತರ ಪೋನ್ ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದ.ಈ ವೇಳೆ ಕೆಲವು ಪೋಟೊಗಳನ್ನ ವಾಟ್ಸಪ್ ಮಾಡುತಿದ್ದ.ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ.

ಹಣದ ಅವಶ್ಯಕತೆ ಇದೆ ಅಂತಾ ಹತ್ತು, ಇಪ್ಪತ್ತು, ಐವತ್ತು ಸಾವಿರ ವರೆಗೂ ಹಣ ಹಾಕಿಸಿಕೊಂಡು ನಂಬರ್ ಬ್ಲಾಕ್ ಮಾಡುತ್ತಿದ್ದ. ಹೀಗೆ ಯುವತಿ ಪೋಟೊ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್. ತನ್ನ ಪೋಟೊ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದು ಶಾಕ್ ಆಗಿದ್ದ ಯುವತಿ. ದುಬೈನಲ್ಲಿ ಸೆಟ್ಲ್ ಆಗಿದ್ಯಾಕೆ ತನ್ನ ಪೋಟೊ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿ ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಾಳೆ‌.

ಇಷ್ಟಾದರೂ ಆತ ಕೇಳದ ಹಿನ್ನೆಲೆ ಜು. 4ರಂದು ಬೆಳಗಾವಿಗೆ ಆಗಮಿಸಿ ದೂರು ಸಲ್ಲಿಸಿದ್ದಳು. ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯ ದೂರಿನ ಮೇರೆಗೆ ಗೋವಾದಲ್ಲಿ ಮಸ್ತ ಮಜಾ ಮಾಡುತ್ತಿದ್ದವನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!