ಡ್ರೋಣ್ ಪ್ರತಾಪ್ ಆಟ ಮೆಚ್ಚಿದ ಕರುನಾಡು ; ಸಖತ್ ಕಿಲಾಡಿ ಎಂದ ನೆಟ್ಟಿಗರು
ಬಿಗ್ ಬಾಸ್ ಮನೆಯಲ್ಲಿ ಡ್ರೋಣ್ ಪ್ರತಾಪ್ ಆಡುತ್ತಿರುವ ಆಟ ಸಧ್ಯ ಕನ್ನಡಿಗರ ಮನ ಗೆದ್ದಂತೆ ಕಾಣುತ್ತಿದೆ. ಮನೆಯಲ್ಲಿ ಏಕಾಂಗಿ ಹೋರಾಟ ಮಾಡುತ್ತಲೇ ದಿನಾ ಕಳೆಯುವ ಪ್ರತಾಪ್ ಸಧ್ಯ ಎಲ್ಲರ ಫೆವರೇಟ್ ಆಗುತ್ತಿದ್ದಾರೆ.
ಕಳೆದ ಎರಡು ವಾರಕ್ಕೆ ಹೋಲಿಸಿದರೆ ಈ ಬಾರಿ ಡ್ರೋಣ್ ಪ್ರತಾಪ್ ಚುರುಕಾದಂತೆ ಕಾಣಿಸುತ್ತಿದ್ದಾರೆ. ಎಲ್ಲಾ ಆಟಗಳಲ್ಲಿ ತೊಡಗಿಸಿಕೊಂಡು ಸಧ್ಯ ಮನೆಯ ಮಂದಿಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲಿಗೆ ಡ್ರೋಣ್ ಪ್ರತಾಪ್ ಮೇಲೆ ಜನರ ಭಾವನೆ ಬೇರೆ ಇತ್ತು. ಯಾವಾಗ ಬಿಗ್ ಬಾಸ್ ಶೋ ಗೆ ತೆರಳಿ ತಮ್ಮ ಸೌಮ್ಯ ಸ್ವಭಾವ ಜನರ ಮುಂದಿಡುತ್ತಾ ಸಾಗಿದರು ಆಗ ಅವರ ಮೇಲೆ ಇದ್ದ ಕೋಪ ಶಾಂತವಾಗಿದೆ.