
ಪ್ರಜ್ವಲ್ ರೇವಣ್ಣ ದಾಖಲೆ ಸರಿಗಟ್ಟಿದ ಕಾಮುಕ ; 30 + ವೀಡಿಯೋ ಜೊತೆ ಆರೋಪಿ ಸೀಜ್

ದಾವಣಗೆರೆ : ಈತನ ವಯಸ್ಸು 56, ಕೆಲಸ ಔಷಧಿ ಅಂಗಡಿ ಮಾಲಿಕ ಆದರೆ 30 ಕ್ಕೂ ಅಧಿಕ ಮಹಿಳೆಯರ ಜೊತೆಗಿನ ವೀಡಿಯೋ ಈತನ ಬಳಿ ಸಿಕ್ಕಿದ್ದು, ಪ್ರಜ್ವಲ್ ರೇವಣ್ಣ ದಾಖಲೆ ಮುರಿದು ವಿಕೃತಿ ಮೆರೆದಿರುವ ಕಾಮುಕ.
ಶಾಲಾ ಬಾಲಕಿ ಸೇರಿದಂತೆ ಅದೆಷ್ಟೋ ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಆ ವೀಡಿಯೋ ಸೆರೆ ಹಿಡಿದು ಇಟ್ಟುಕೊಂಡಿದ್ದ ಅಮ್ಜದ್ ಎಂಬ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ಪಟ್ಟಣದಲ್ಲಿ ಔಷಧ ಅಂಗಡಿ ಇಟ್ಟಿಕೊಂಡಿರುವ ಅಮ್ಜದ್ ಎಂಬಾತ ಅಂಗಡಿಗೆ ಬರುವ ಯುವತಿಯರಿಗೆ ಹಣದ ಆಮಿಷ ತೋರಿಸುತ್ತಿದ್ದ. ಬಲವಂತವಾಗಿ ಅವರನ್ನು ಲೈಂಗಿಕ ಕ್ರಿಕೆಗೆ ಬಳಸಿಕೊಂಡು ಗುಪ್ತವಾಗಿ ವೀಡಿಯೋ ಮಾಡಿಟ್ಟುಕೊಳ್ಳುತ್ತಿದ್ದ ಐನಾತಿ.
ಅಮ್ಜಾದ್ ಬಂಧಿತ ಆರೋಪಿ. ಎ ಎಸ್ ಐ ಶಶಿಧರ್ ಚನ್ನಗಿರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ಕಲಂ ನಂಬರ್ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 BNS ACT -2023 ಹಾಗೂ ಕಲಂ 4, 6, 14,15,
ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲಿಸಿ ಸಿಇಎನ್ ಪೊಲೀಸರು ನಿನ್ನೆ ಅಮ್ಜಾದ್ ಬಂಧನ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.