Select Page

ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಗೆ ಬಿರಿಯಾನಿ ಊಟ ಕೊಟ್ಟ ಪೊಲೀಸರು

ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಗೆ ಬಿರಿಯಾನಿ ಊಟ ಕೊಟ್ಟ ಪೊಲೀಸರು

ಬೆಂಗಳೂರು : ಕೋಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಹಾಗೂ ಆತನ ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ ಅವರ ಗ್ಯಾಂಗ್ ಗೆ ಮಂಗಳವಾರ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸಿಬ್ಬಂದಿ ಬಿರಿಯಾನಿ ಊಟ ಕೊಡಿಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್ ಸೇರಿ ಹತ್ತು ಜನ ಆರೋಪಗಳನ್ನು,

ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ‌ಆದೇಶ ಹೊರಡಿಸಿದ್ದರು. ಮಂಗಳವಾರ ಸಂಜೆ ಎಲ್ಲಾ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ‌ಪೊಲೀಸ್ ಠಾಣೆಯಲ್ಲಿ ಕರೆತಂದಿದ್ದು ಇಂದಿನಿಂದ ವಿಚಾರಣೆ ಮುಂದುವರಿಯಲಿದೆ.

ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಗಳನ್ನು ಕಳಿಸಿದ್ದ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯವರ ಕೊಲೆ ನಡೆದಿದ್ದು, ದರ್ಶನ್‌ ಅವರ ಮೌಖಿಕ ಆದೇಶದ ಮೇಲೆ ಆರೋಪಿಗಳು ಈ ಹತ್ಯೆಯನ್ನು ನಡೆಸಿದ್ದಾರೆಂದು ಹೇಳಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಬಂಧಿತರು ನಟ ದರ್ಶನ್‌ ಹೆಸರು ಬಾಯಿಬಿಟ್ಟಿದ್ದರೆನ್ನಲಾಗಿದ್ದು,

ಈ ಹಿನ್ನೆಲೆಯಲ್ಲಿ ದರ್ಶನ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಒಟ್ಟು 10 ಜನರನ್ನು ಬಂಧನಕ್ಕೊಳಪಡಿಸಲಾಗಿದೆ.

ನಟ ದರ್ಶನ್ ಜೊತೆಗೆ ಆತ್ಮೀಯ ಸಂಪರ್ಕ  ಹೊಂದಿದ್ದ ನಟಿ ಪವಿತ್ರಾ ಗೌಡ,  ಈ ಬಗ್ಗೆ ದರ್ಶನ್‌ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಇದರಿಂದ ಕುಪಿತರಾಗಿದ್ದ ದರ್ಶನ್‌ ರೇಣುಕಾಸ್ವಾಮಿ ಬಗ್ಗೆ ಕೋಪ ತಾಳಿದ್ದರು.

Advertisement

Leave a reply

Your email address will not be published. Required fields are marked *

error: Content is protected !!