
ಅಧಿಕಾರ ಅನುಭವಿಸಿದ ಸುಧಾಕರ್ ಗೆ ಈಗ ಜ್ಞಾನೋದಯ ಆಗಿದ್ದೇಗೆ…?

ಬೆಂಗಳೂರು : ಬಾಂಬೆ ಬಾಯ್ಸ್ ಎಂಬ ಖ್ಯಾತಿ ಪಡೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಡವಿದವರಲ್ಲಿ ಒಬ್ಬರಾದ ಮಾಜಿ ಸಚಿವ ಕೆ. ಸುಧಾಕರ ಅವರಿಗೆ ಇದ್ದಕ್ಕಿದ್ದಂತೆ ಈಗ ಜ್ಞಾನೋದಯವಾಗಿದೆ ಎಂದನಿಸುತ್ತದೆ. ನನಗೆ ಅಂದೇ ಸಿದ್ದರಾಮಯ್ಯ ಅವರು ಹೇಳಿದ್ದರು, ನನ್ನ ರಾಜಕೀಯ ಭವಿಷ್ಯ ಬದಿಗಿಟ್ಟು ಬಿಜೆಪಿ ಸೇರಿದೆ ಎಂಬ ಮಾತು ಸಧ್ಯ ಎಲ್ಲೆಡೆ ವೈರಲ್ ಆಗುತ್ತಿವೆ.
ಹಾಗಾದರೆ ನಿಜಕ್ಕೂ ದೇಶದ ಒಳತಿಗೆ ಡಾ. ಕೆ ಸುಧಾಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರಾ. ಇಲ್ಲ ಮಹತ್ವಾಕಾಂಕ್ಷೆಯಿಂದ ಈ ನಿರ್ಧಾರಕ್ಕೆ ಬಂದಿರಾ ಅದು ಸತ್ಯವಲ್ಲ. ಕೇವಲ ಅಧಿಕಾರದ ಆಸೆಯಿಂದ ಸುಧಾಕರ್ ಅಂದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿಗೆ ಬಂದಿದ್ದು ಎಂದು ಜನ ಈಗಲೂ ಮಾತನಾಡಿಕೊಳ್ಳುತ್ತಾರೆ. ಈ ಮಧ್ಯೆ ಸುಧಾಕರ ಅವರ ತ್ಯಾಗದ ಮಾತಿನ ಹಿಂದಿನ ಮರ್ಮದ ಕುರಿತು ಬಲು ಜೋರಾಗಿ ಮಾತನಾಡುತ್ತಿದ್ದಾರೆ.
ಹೌದು ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರವಾಗಿ ನನ್ನನ್ನು ಕಡೆಗಣಿಸಿಸಲಾಗಿದೆ ಎಂದು ಸಂಸದ ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ ಏಕಾಏಕಿ ಈ ರೀತಿಯಲ್ಲಿ ಸುಧಾಕರ ಮಾತನಾಡಲು ಏನು ಕಾರಣ ಅಂದರೆ ಅದಕ್ಕೆ ಯಾರ ಬಳಿಯೂ ಉತ್ತರ ಇಲ್ಲ. ಈಗಾಗಲೇ ವಿಜಯೇಂದ್ರ ವಿರುದ್ಧ ಕತ್ತಿ ಮಸಿಯುತ್ತಿರುವ ಯತ್ನಾಳ್ ಬಣಕ್ಕೆ ಸಧ್ಯದ ಘಟನೆ ಮತ್ತಷ್ಟು ಬಲ ನಿಡೀದಂತಾಗಿದೆ.
ಸಾಮಾನ್ಯವಾಗಿ ಸುಧಾಕರ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದರು. ಇನ್ನೂ ವಲಸಿಗರಾದರೂ ಬಿಜೆಪಿಯಲ್ಲಿ ಇವರನ್ನು ಅಂಗೈಯಲ್ಲಿ ಹಿಡಿದುಕೊಂಡು ನಡೆಸಿಕೊಂಡಿತು. ಇದಾದ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಪ್ರದೀಪ್ ಈಶ್ವರ ವಿರುದ್ಧ ಹೀನಾಯವಾಗಿ ಸೋತರು. ನಂತರ ಇವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಸಂಸದರನ್ನಾಗಿ ಆಯ್ಕೆ ಮಾಡಲಾಯಿತು. ಇಷ್ಟೆಲ್ಲ ಅನುಭವಿಸಿರುವ ಸುಧಾಕರ ಅವರಿಗೆ ಕೇವಲ ಜಿಲ್ಲಾಧ್ಯಕ್ಷರ ನೇಮಕ ವಿಚಾರಕ್ಕೆ ಕೋಪ ಬಂತಾ ಎಂದರೆ ಖಂಡಿತವಾಗಿಯೂ ಅಲ್ಲ.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿರುವ ಸಂದೀಪ್ ರೆಡ್ಡಿ ಅವರೂ ಸುಧಾಕರ ಅವರ ಸಂಬಂಧಿ ಆಗಬೇಕು. ಜೊತೆಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಆದರೂ ಡಾ. ಸುಧಾಕರ ಅವರ ಮುನಿಸಿದೆ ಕಾರಣವಂತೂ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಆದರೆ ಕೆಲ ಬಿಜೆಪಿ ಸಂಸದರನ್ನು ಮಾಜಿ ಮುಖ್ಯಮಂತ್ರಿ ಒಬ್ಬರು ಎತ್ತಿಕಟ್ಟಿ ಮೋದಿ ಸರ್ಕಾರದಲ್ಲಿ ಸಚಿವಸ್ಥಾನದ ಹುದ್ದೆ ಪಡೆಯಬೇಕು ಎಂಬ ಲೆಕ್ಕಾಚಾರ ಹೊಂದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.