
ನಾಲ್ವರ ಮೃತದೇಹ ದೆಹಲಿಗೆ ರವಾನೆ ; ಕುಟುಂಬದ ನೆರವಿಗೆ ಮೃಣಾಲ್ ಹೆಬ್ಬಾಳಕರ್

ಬೆಳಗಾವಿ : ಮಹಾಕುಂಭಮೇಳ ದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ದೆಹಲಿಗೆ ಸ್ಥಳಾಂತರ ಮಾಡಲಾಗಿದ್ದು, ಕುಟುಂಬದವರ ನೆರವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ನಿಂತಿದ್ದಾರೆ.
ಪ್ರಯಾಗರಾಜ್ ನಿಂದ ದೆಹಲಿಗೆ ತರಲಾಗಿರುವ ನಾಲ್ವರ ಮೃತದೇಹಗಳನ್ನು ಕೆಲಹೊತ್ತು ಅಲ್ಲಿಯೇ ಇರಿಸಲಾಗುತ್ತದೆ. ಸ್ಥಳಕ್ಕೆ ಬಂದ ಮೃಣಾಲ್ ಹೆಬ್ಬಾಳಕರ್ ಮೃತದೇಹಗಳಿಗೆ ಗೌರವ ನಮನ ಸಲ್ಲಿಸಿ ಕುಟುಂಬದವರಿಂದ ಮಾಹಿತಿ ಪಡೆದುಕೊಂಡರು.
ಸಧ್ಯ ದೆಹಲಿಗೆ ತರಲಾದ ಮೃತದೇಹಗಳ ಜೊತೆಗೆ ಗಾಯಾಳುಗಳನ್ನು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಗೆ ವಿಮಾನಯಾನದ ಮೂಲಕ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಮಂಗಳವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ
ನಗರದ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ ( 44 ) , ಹಾಗೂ ಮಗಳು ಮೇಘಾ ಹತ್ತರವಾಠ (24). ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ (61), ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ (48) ಮೃತ ದುರ್ದೈವಿಗಳು.
ಬುಧವಾರ ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ಪವಿತ್ರ ಸ್ನಾನ ಮಾಡಲು ತ್ರಿವೇಣಿ ಸಂಗಮದ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಸೆಕ್ಟರ್ 20 ರಲ್ಲಿ ಸಂಭವಿಸಿದ್ದ ಕಾಲ್ತುಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.