ಕುರ್ಚಿಗಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದವರು : ಕೇಂದ್ರ ಸಚಿವ ನಾರಾಯಣಸ್ವಾಮಿ
ಬೆಳಗಾವಿ : ವಿಪಕ್ಷ ನಾಯಕರಾಗಿರುವ ಸಿದ್ದರಾಯ್ಯನವರು ಮೂಲತಃ ಜನತಾ ಪರಿವಾರದಿಂದ ಬಂದವರು ಅವರಿಗೆ ಕಾಂಗ್ರೆಸ್‌ನ ಪರಿಚಯ ಇಲ್ಲ. ಅವರು ಅಧಿಕಾರ, ಕುರ್ಚಿಗಾಗಿ ಕಾಂಗ್ರೆಸ್‌ಗೆ ಬಂದವರು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹರಿಹಾಯ್ದರು.
ಶನಿವಾರ ನಗರದ ಸಂಗಮೇಶ್ವರ ನಗರದ ಬಾಬು ಜಗಜೀವನರಾಮ್ ಉದ್ಯಾನ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂಪುಟದಲ್ಲಿ ಸಚಿವರಾದಾಗ ಅವರು ಮಹಿಳಾ ಕಾಯ್ದೆಯನ್ನು ಸಂಸದನಲ್ಲಿ ಪ್ರವೇಶ ಮಾಡಬೇಕೆಂದಾಗ ಅದನ್ನು ವಿರೋಧ ಮಾಡಿ ಅಂಬೇಡ್ಕರ್ ಅವರ ರಾಜೀನಾಮೆ ಪಡೆದ ಪಕ್ಷ ಕಾಂಗ್ರೆಸ್ ಎಂದು ಸಿದ್ದರಾಮಯ್ಯನವರು ಇಡೀ ದೇಶಕ್ಕೆ ಹೇಳಿದರೆ ಸೂಕ್ತ. ಅಂಬೇಡ್ಕರ್ ಅವರು ರಾಜೀನಾಮೆ ನೀಡಿದ್ದು ಯಾವ ಕಾರಣಕ್ಕೆ ? ಮಹಿಳಾ ಮಸೂದೆಯನ್ನು ವಿರೋಧ ಮಾಡಿದಾಗ ಅವರು ಕೊಟ್ಟರು. ಅದನ್ನು ಹೇಳಿ ಬಿಟ್ಟರೆ ನಾನು ಅವರಿಗೆ ತಲೆ ಬಾಗುತ್ತೇನೆ ಎಂದರು.
ಸ್ವಾತಂತ್ರ್ಯ ಬಂದ ಬಳಿಕ 57 ವರ್ಷ ಭಾರತದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತು. ಅವರ ಆಡಳಿತದಲ್ಲಿ ಪತ್ರಿಕೆಗಳನ್ನು ನೋಡಿದರೆ ಅಲ್ಪಸಂಖ್ಯಾತ ಮತ್ತು ಹಿಂದುಗಳ ನಡುವೆ ಯುದ್ಧದ ಸುದ್ದಿಗಳು ನೋಡಲು ಸಿಗುತ್ತಿದ್ದವು. ಅವರ ಕಾಲಘಟದಲ್ಲಿ ಪಂಜಾಬ್, ಜಮ್ಮು ಕಾಶ್ಮೀರ, ಛತ್ತಿಸಗಡ, ನಾಗಾಲ್ಯಾಂಡ್ 57 ವರ್ಷನೂ ಆಡಳಿತ ನಡೆಸಿದ ನಡುವಳಿಕೆಗಳಲ್ಲಿ ಅಂತರ್ಯುದ್ಧ ನೋಡುತ್ತಿದ್ದೇವು. ಅದನ್ನು ಸಿದ್ದರಾಮಯ್ಯನವರು ಸಮಾಜಕ್ಕೆ ಹೇಳಬೇಕೆಂದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾರೆ ಎಂದು ಪ್ರತಿಯೊಂದು ಯೋಜನೆಗೂ ವಿರೋಧ ಮಾಡುವುದಾಗಿ. ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಯಾವೊಂದು ವಿಷಯವನ್ನು ಆರ್‌ಆರ್‌ಎಸ್ ಮಾದರಿಯನ್ನು ಅಳವಡಿಸಿದ್ದೇವೆ ಎಂದು ಸಿದ್ದರಾಮಯ್ಯನವರು ಹೇಳಲಿ.
ಸಿದ್ದರಾಮಯ್ಯನವರು ಅವರದ್ದೇ ಪಕ್ಷದ ವೇದಿಕೆಯಲ್ಲಿ ಸಂವಾದ ನಡೆಸಿ ಎಲ್ಲಿ ನೂನ್ಯತೆ ಇದೆ ಎನ್ನುವುದನ್ನು ಅವರು ಹೇಳಲಿ. ಎಲ್ಲಿ ತಪ್ಪಿದ್ದರೆ ಅದನ್ನು ತಿಳಿಸಲಿ ಎಂದು ಸವಾಲ್ ಹಾಕಿದರು.
ದೇಶದ ಅಮೃತ ಮಹೋತ್ಸವದ ಬಳಿಕ ಗಾಂಧಿ ಜಯಂತಿ ಇಡೀ ದೇಶದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿಯೂ ಸಹ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇಲ್ಲಿನ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಡಿಜಿಟಲ್ ಗ್ರಂಥಾಲಯ ಬೇಕು. ಊಟದ ಹಾಲ್‌ನ್ನು ದೊಡ್ಡದಾಗಿ ಮಾಡಬೇಕೆಂಬ ಒತ್ತಾಯ ಮಾಡಿದ್ದಾರೆ. ಅದನ್ನು ರಾಜ್ಯ ಸರಕಾರಕ್ಕೆ ಪ್ರಸ್ತಾವಲೆ ಕಳೆಸಿ ಮಾಡಿಸುವುದಾಗಿ ಹೇಳಿದರು.
ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಲಿದೆ. ಗ್ರಾಮೀಣ ಭಾಗದ ವಸತಿ ನಿಲಯಗಳಲ್ಲಿ ಕೆಲ ಮೂಲಭೂತ ಸೌಕರ್ಯ ಕೊರತೆ ಇದೆ ಎಂದು ತಿಳಿದು ಬಂದಿದೆ. ಸರಕಾರ ಈ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಕೇಂದ್ರ ಸಚಿವರು, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಮಾಡಿಕೊಡುವಂತೆ ವಿದ್ಯಾರ್ಥಿಗಳು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಪರಿಶೀಲನೆ ನಡೆಸಿ ಡಿಜಿಟಲ್ ಗ್ರಂಥಾಲಯ ಮಾಡುವುದರ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದರು.
ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ಉಮಾ ಸಾಲಿಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .