ಬುಡಾ ಭ್ರಷ್ಟಾಚಾರ ಕುರಿತು ತನಿಖೆ – ಸಚಿವ ಸತೀಶ್ ಜಾರಕಿಹೊಳಿ ಭರವಸೆ
ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಸಿಓಡಿ ಅಥವಾ ಸಿಐಡಿ ತನಿಖೆ ನಡೆಸಲಾಗುವದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಇವರು. ಒಂದು ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು 20 ರಿಂದ 25 ಲಕ್ಷ ರೂ,ಗಳಿಗೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಎರಡೂ ಸಾರಿ ನೋಟಿಪಿಕೇಷನ್ ಮಾಡಿದರೂ ಜನ ಬಂದಿಲ್ಲ. ಬರದೆ ಇದ್ದರೆ ಆಕ್ಷನ್ ಮಾಡಲು ಅಧಿಕಾರ ಎನ್ನುತ್ತಾರೆ.
ಆದರೆ ನಮ್ಮ ವಾದ ಅಧಿಕಾರಿಗಳಿಗೆ ಅಧಿಕಾರ ಇದೆ. ಆದರೆ ಪಕ್ಕದ ಆಸ್ತಿ ಒಂದು ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ನೀವು ಮಾರಾಟ ಮಾಡಿದ್ದು 25 ಲಕ್ಷ. ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಯಾವುದೇ ಕಾರಣಕ್ಕೂ ಈ ಪ್ರಕರಣ ಬಿಡುವ ಮಾತೇ ಇಲ್ಲ ಎಂದರು.
ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಹೊಸ ಶಿಕ್ಷಣ ನೀತಿಗೆ ನಮ್ಮ ಸರಕಾರದ ವಿರೋಧ ಇದೆ. ಪಠ್ಯಕ್ರಮದಲ್ಲಿನ ಅನಾವಶ್ಯಕವಾದ ವಿಷಯಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಶಾಲಾ ಪಠ್ಯದಲ್ಲಿ ಅನಾವಶ್ಯಕತೆಯ ವಿಷಯಗಳಿಗೆ ಕತ್ತರಿ ಹಾಕಲಾಗುವುದು ಎಂದರು.

