ಅಳೆದು ತೂಗಿ ಬಿಜೆಪಿ ಮೊದಲ ಪಟ್ಟಿ ಸಿದ್ದ ! ಬೆಳಗಾವಿಯ ಒಂಬತ್ತು ಕ್ಷೇತ್ರಕ್ಕೆ ಅಭ್ಯರ್ಥಿ ಪೈನಲ್?
ಬೆಳಗಾವಿ : ಈಗಾಗಲೇ ಟಿಕೆಟ್ ಹಂಚಿಕೆ ಕುರಿತು ಬಿಜೆಪಿ ಮಹತ್ವದ ಸಭೆ ನಡೆಸುತ್ತಿದ್ದು ಅಭ್ಯರ್ಥಿ ಆಯ್ಕೆ ಜೋರಾಗಿ ನಡೆಯುತ್ತಿದೆ. ಯಾವುದೇ ಗೊಂದಲ ಇಲ್ಲದ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲು ಬಿಜೆಪಿ ತಯಾರಿ ನಡೆಸಿದೆ.
ಮೊದಲ ಪಟ್ಟಿಯಲ್ಲಿ ಸಚಿವ ಗೋವಿಂದ ಕಾರಜೋಳ, ಬಿ.ವೈ ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಸಿ.ಟಿ ರವಿ, ಜೆ.ಸಿ ಮಾಧುಸ್ವಾಮಿ ಸೇರಿದಂತೆ ಸುಮಾರು 80 ಕ್ಕೂ ಅಧಿಕ ಕ್ಷೇತ್ರದ ಲಿಸ್ಟ್ ತಯಾರಾಗಿದ್ದು ಹೈಕಮಾಂಡ್ ಒಪ್ಪಿಗೆ ಒಂದೇ ಬಾಕಿ ಇದೆ.
ಇನ್ನೂ ಬೆಳಗಾವಿಯಲ್ಲಿ ಒಂಬತ್ತು ಕ್ಷೇತ್ರದ ಅಭ್ಯರ್ಥಿಗಳ ಟಿಕೆಟ್ ಪೈನಲ್ ಮಾಡಿದ್ದು ಯಾವುದೇ ಗೊಂದಲ ಇಲ್ಲದ ಕ್ಷೇತ್ರದ ಅಭ್ಯರ್ಥಿಗಳನ್ನು ಘೊಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯ ಒಂಬತ್ತು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಪೈನಲ್ : ಈ ಪಟ್ಟಿ ಇಲ್ಲಿದೆ ನೋಡಿ
ಅರಭಾವಿ – ಬಾಲಚಂದ್ರ ಜಾರಕಿಹೊಳಿ
ಗೋಕಾಕ್ – ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ – ಅನಿಲ್ ಬೆನಕೆ
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ನಿಪ್ಪಾಣಿ – ಶಶಿಕಲಾ ಜೊಲ್ಲೆ
ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
ರಾಮದುರ್ಗ – ಮಹಾದೇವಪ್ಪ ಯಾದವಾಡ
ಕುಡಚಿ – ಪಿ. ರಾಜೀವ್
ರಾಯಬಾಗ – ದುರ್ಯೋಧನ ಐಹೊಳೆ