ಲಖನ್ ಮೇಲ್ಮನೆಗೆ ಮಹಾಂತೇಶ ನಡಿ ಮನೆಗೆ
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ದ್ವಿಸದಸ್ಯ ಪರಿಷತ್ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಕನ್ ಜಾರಕಿಹೊಳಿ ಗೆಲುವು ಸಾಧಿಸಿದ್ದು ಹಾಲಿ ಪರಿಷತ್ ಅಭ್ಯರ್ಥಿ ಬಿಜೆಪಿಯ ಮಹಾಂತೇಶ ಕವಠಗಿಮಠ ತೀವ್ರ ಮುಖ ಭಂಗ ಅನುಭವಿಸಿದ್ದಾರೆ.
ಪಡೆದ ಮತ –
ಕಾಂಗ್ರೆಸ್ – 3431
ಪಕ್ಷೇತರ – 2412
ಬಿಜೆಪಿ – 1900
ಮಂಗಳವಾರ ಚಿಕ್ಕೋಡಿಯಲ್ಲಿ ನಡೆದ ಪರಿಷತ್ ಮತ ಎಣಿಕೆಯಲ್ಲಿ ಮೊದಲ ಗೆಲುವನ್ನು ಶಾಸಕಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದರು. ಇನ್ನೂ ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಏರ್ಪಟ್ಟ ಪೈಪೋಟಿಯಲ್ಲಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.