ಸಾಹುಕಾರ್ ರಮೇಶ್ ಗೆ ಸೆಡ್ಡು ಹೊಡೆದ ಲಕ್ಷ್ಮೀ: ಚನ್ನರಾಜ ಹಟ್ಟಿಹೊಳಿ ಗೆಲವು
ಬೆಳಗಾವಿ/ ಚಿಕ್ಕೋಡಿ : ಬಿಜೆಪಿ ಪಾರುಪತ್ಯ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ 3356 ಪ್ರಥಮ ಪ್ರಾಶಸ್ತ್ಯ ಮತ ಪಡೆದು ಭರ್ಜರಿಯಾಗಿ ಗೆಲವು ಸಾಧಿಸಿದ್ದಾರೆ.
ಮತ ಏಣಿಕೆಯ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಗೆಲುವಿನ ಸಂಭ್ರಮಿಸಿದರು.
ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಾಹುಕಾರರು ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೆ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದರು. ಕೇವಲ ರಮೇಶ ಜಾರಕಿಹೊಳಿ ಕಾಲಿಗೆ ಚಕ್ರ ಕಟ್ಟಿಕೊಂಡು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಆದರೆ ಉಳಿದ ಘಟಾನುಘಟಿಗಳು ಮಾತ್ರ ಹೇಳಿಕೊಳ್ಳುವಂಥ ಪ್ರಚಾರ ಬಿಜೆಪಿ ಅಭ್ಯರ್ಥಿ ಪರ ನಡೆಸಲಿಲ್ಲ.
ಫಲಿತಾಂಶ ಕೇವಲೇ ಕ್ಷಣದಲ್ಲಿ ಬರುವ ಸಾಧ್ಯತೆ ಇದ್ದು, ಮತ ಏಣಿಕೆ ಕೇಂದ್ರದಲ್ಲಿ ಬಿಜೆಪಿ ನಾಯಕರು ಇಲ್ಲದೆ ಭಣಗುಡುತ್ತಿದೆ.