
ಬೆಂಗಳೂರಿನಲ್ಲಿ ಭೀಕರ ಅಪಘಾತ : ಶಾಸಕರ ಮಗ ಸೊಸೆ ಸೇರಿ 7 ಸಾವು

ಬೆಂಗಳೂರು : (ಆ.31) ನಗರದ ಕೋರಮಂಗಲದಲ್ಲಿ ತಡರಾತ್ರಿ ಸಂಭವೀಸಿದ ಭೀಕರ ಅಪಘಾತದಲ್ಲಿ ಏಳು ಜನ ಮೃತಪಟ್ಟಿದ್ದು ಇದರಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕರ, ಮಗ ಹಾಗೂ ಸೊಸೆ ಇದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಈ ಏಳು ಜನರಲ್ಲಿ ಡಿಎಂಕೆ ಶಾಸಕರ ಪುತ್ರ ಹಾಗೂ ಸೊಸೆ ಕೂಡಾ ಇದ್ದರು. ಮೃತರಾದ ಕರುಣಸಾಗರ ಹಾಗೂ ಬಿಂದು ಇಬ್ಬರು ದಂಪತಿಗಳು ವೃತ್ತಿಯಲ್ಲಿ ವೈದ್ಯರು. ತಡರಾತ್ರಿ ವೇಗವಾಗಿದ್ದ ಬರುತ್ತಿದ್ದ ಕಾರು ಕೊರಮಂಗಲ ರಸ್ತೆ ಬದಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.
ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಹರಿಯಾಣ ಮೂಲದ ಉತ್ಸವ್ ( 23 ) ಅಕ್ಷಯ್ ( 23 ) ಡಾ. ಧನುಷಾ 21 ಇತಿಶಾ 21 ಕೆರಳ ಮೂಲದ ಅಕ್ಷಯ್ ಗೋಯಲ್ 23 ಹುಬ್ಬಳ್ಳಿ ಮೂಲದ ರೋಹಿತ್ 23 ಎಂಬುವರ ಜೊತೆಗೆ ಶಾಸಕರ ಮಗ ಹಾಗೂ ಸೊಸೆ ಮೃತಪಟ್ಟಿದ್ದಾರೆ. ಅಡಿಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ.