ಬೆಳಗಾವಿ : ವರದಕ್ಷಿಣೆ ತರದ ಹೆಂಡತಿ ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿಟ್ಟ ಪತಿ
ಬೆಳಗಾವಿ : ಮೂಡಲಗಿ ಮೂಲದ ಸಾಕ್ಷಿ ಕುಂಬಾರ ಸಾವಿನ ಪ್ರಕರಣದ ಸಾಕಷ್ಟು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ. ಸಾಕ್ಷಿಯ ಭೀಕರ ಹತ್ಯೆ ಹಿಂದೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ಮೃತ ಸಾಕ್ಷಿಯ ಪತಿ ಹಾಗೂ ಆಕೆಯ ಅತ್ತೆ ಈ ಕೊಲೆಗೆ ಸಂಚು ರೂಪಿಸಿದ್ದರಾ ಎಂಬ ಅನುಮಾನ ಮೂಡಿದೆ. ಆಕೆಯ ಕೊಲೆಯ ಕೆಲ ದಿನಗಳ ಮುಂಚೆ ಅತ್ತೆ ಬೇರೆ ಊರಿಗೆ ಪರಾರಿಯಾಗಿದ್ದಾಳೆ. ಇನ್ನೂ ಕೊಲೆಗಡುವ ಪತಿ ತಲೆಮರೆಸಿಕೊಂಡಿದ್ದರೆ, ಮಾವ ಅಲ್ಲೇ ಇದ್ದರು ಮೃತದೇಹದ ವಾಸನೆ ಸೇರಿದಂತೆ ಅನುಮಾನ ಬರದಿರುವುದು ವಿಪರ್ಯಾಸ.
ಏನಿದು ಘಟನೆ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಾಮಲದಿನ್ನಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಾಕ್ಷಿ ಆಕಾಶ್ ಕುಂಬಾರ (20) ಕೊಲೆಯಾದ ಮೃತ ದುರ್ದೈವಿ. ಪತ್ನಿಯನ್ನು ಕೊಲೆ ಮಾಡಿರುವ ಆಕಾಶ್ ಕುಂಬಾರ ಪರಾರಿಯಾಗಿರುವ ಆರೋಪಿ. ಕಳೆದ ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಂಬಂಧಿಕರ ಮನೆಗೆ ಹೋಗಿದ್ದ ಆಕಾಶ್ ತಾಯಿ ಬುಧವಾರ ಮನೆಗೆ ವಾಪಸ್ ಆದಾಗ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ,ಸ್ಥಳಕ್ಕೆ ಮೂಡಲಗಿ ಪೊಲೀಸರು ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಭೇಟಿ ನೀಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


