Select Page

ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿ ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿ ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಮೂಡಲಗಿ : ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ ಕಳ್ಳುವಿಗೆ ಬಳಸಿದ ಆಟೋ ರಿಕ್ಷಾ ಹಾಗೂ ಕಳ್ಳತನ ಮಾಡಿದ ಸುಮಾರು 9.60 ಲಕ್ಷದ ಬಂಗಾರ ಆಭರಣಗಳನ್ನು ಕುಲಗೋಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಕಾಕ ನಗರದ ರಾಘವೇಂದ್ರ ರಾಮು ರೇವಣಕರ(22) ಹಾಗೂ ಓಂಕಾರ ದಯಾನಂದ ಜಾಧವ(21) ಬಂಧಿತ ಆರೋಪಿಗಳು

ಕಳೆದ ಸಪ್ಟಂಬರ್ ನಲ್ಲಿ ಕುಲಗೋಡ ಠಾಣಾ ವ್ಯಾಪ್ತಿಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಕಳ್ಳತನವಾದ ಬಗ್ಗೆ ಕುಲಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಎಸ್.ಪಿ ಯವರ ಮಾರ್ಗದರ್ಶನದಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪಿ.ಎಸ್.ಐ ಆನಂದ ಬಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಿ 9.60ಲಕ್ಷ ಮೌಲ್ಯದ 113 ಗ್ರಾಂ ಬಂಗಾರ ಮತ್ತು ಆಟೋರಿಕ್ಷಾ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ. ಕುಲಗೋಡ ಪಿ.ಎಸ್.ಐ ಗಳಾದ ಆನಂದ ಬಿ, ವಿ.ವಿ ಉತ್ರೇಶ್ವರ. ಎಮ್.ಬಿ ಕರಣಿ ಮತ್ತು ಸಿಬ್ಬಂದಿಗಳಾದ ವಾಯ್.ಎಮ್.ಸಾಂಗಲಿ. ಎಸ್.ವಿ ಹಣಜಿ. ಎಮ್.ಬಿ ಆಡಿನ.

ಕೆ.ಸಿ ಬಾಗಲಿ. ಎಮ್.ಎಸ್ ಕುರೆನ್ನವರ. ಎಸ್.ಎನ್ ಬಡಬಡೆ. ಎಲ್.ಎಲ್. ಪೂಜೇರ. ಎಸ್.ಎಫ ಮಳಲಿ. ವಿ.ಎಲ್ ದೂಳಪ್ಪನವರ. ಎ.ಎಚ್ ವೇಶಧಾರಿ. ವಿನೋದ ಟಕ್ಕನವರ ಕಳ್ಳರ ಪತ್ತೆಯ ಕಾರ್ಯಾಚರಣೆಯಲ್ಲಿ ಭಾಗಿದ್ದರು.

Advertisement

Leave a reply

Your email address will not be published. Required fields are marked *

error: Content is protected !!