
ಗಂಡನ ಕಿಡ್ನಿ ಮಾರಿ ಪ್ರಿಯಕರನೊಂದಿಗೆ ಎಸ್ಕೇಪ್ ಆದ ಮಹಿಳೆ…!

ಪಶ್ಚಿಮ ಬಂಗಾಳ : ವಿವಾಹದ ನಂತರ ಗಂಡನಿಗೆ ವಂಚಿಸಿ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡವರು.. ಅಥವಾ ಮನೆಯಲ್ಲಿದ್ದ ಹಣ ಚಿನ್ನ ದೋಚಿಕೊಂಡು ಪರಾರಿಯಾದವರನ್ನು ಸಮಾಜದಲ್ಲಿ ನೋಡಿರುತ್ತೇವೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಪಾಪಿ ಹೆಂಗಸೊಬ್ಬಳು ಎಂಥಾ ನೀಚ ಕೃತ್ಯ ಮಾಡಿದ್ದಾಳೆ ಗೊತ್ತಾ..?
ಪತಿಗೆ ತನ್ನ ಮೂತ್ರಪಿಂಡವನ್ನು ಹಣಕ್ಕಾಗಿ ಮಾರಾಟ ಮಾಡುವಂತೆ ಒತ್ತಾಯಿಸಿದ ಮಹಿಳೆಯೊಬ್ಬಳು ನಂತರ ಹಣದ ಜೊತೆ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂಕರೇಲ್ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಮಗಳ ಶಿಕ್ಷಣಕ್ಕಾಗಿ ಹಣ ಬೇಕು, ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದೆಲ್ಲ ಕಾರಣ ಹೇಳಿ ಗಂಡನನ್ನು ಕಿಡ್ನಿ ಮಾರುವಂತೆ ಒತ್ತಾಯಿಸಿದ್ದಾಳೆ.
ಅದರಂತೆ ಪತಿ ತನ್ನ ಕಡ್ನಿ ಮಾರಿ ಹತ್ತು ಲಕ್ಷ ರುಪಾಯಿ ಹಣವನ್ನು ಪತ್ನಿಯ ಕೈಗೆ ನೀಡಿದ್ದಾನೆ. ಆದರೆ ಹಣ ಕೈಸೇರುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ರವಿ ದಾಸ್ ಎಂಬ ಪೇಂಟರ್ ಒಬ್ಬನ ಜೊತೆ ಮಹಿಳೆ ಪರಾರಿಯಾಗಿ ಪಕ್ಕದ ಬರಾಕ್‌ಪುರದಲ್ಲಿ ಸಂಸಾರವನ್ನೂ ಶುರು ಮಾಡಿದ್ದಾಳೆ
ವಿಷಯ ತಿಳಿದ ಕಿಡ್ನಿ ಕಳೆದುಕೊಂಡು ಕಂಗಾಲಾಗಿದ್ದ ಗಂಡ ಅವಳ ಮನೆಗೆ ತೆರಳಿ ವಿಚಾರಿಸಿದಾಗ.. ಯಾರು ಏನೇ ಹೇಳಿದರೂ ತಾನು ಪ್ರಿಯಕರನನ್ನು ಬಿಟ್ಟು ಬರುವುದಿಲ್ಲ ಎಂದ ಮಹಿಳೆ ಡಿವೋರ್ಸ್ ನೋಟೀಸ್ ಕೊಡುತ್ತೇನೆ, ಏನು ಬೇಕಾದ್ರೂ ಮಾಡಿಕೊಳ್ಳಿ ಎಂದು ಗಂಡನಿಗೆ ಆವಾಜ್ ಹಾಕಿ ಕಳಿಸಿದ್ದಾಳೆ.
ನಿಷ್ಪಾಪಿ ಗಂಡ ಈಗ ಪತ್ನಿಯೂ ಇಲ್ಲದೇ.. ಕಿಡ್ನಿಯೂ ಇಲ್ಲದೇ ಪರದಾಡುವಂತಾಗಿದೆ.