ಆನೆಯೊಂದಿಗೆ ಆಟ, ಬಾಕ್ಸ್ ಆಫೀಸ್ ಮೇಲೆ ಕಣ್ಣು: ಇದುವೇ ಅಂಟ್ರಿ ವರ್ಗೀಸ್ ಅವರ ‘ಕಟ್ಟಾಲನ್’ ಜಲಕ್!

ಕಟ್ಟಾಲನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ಇಮ್ಮಡಿಗೊಳಿಸಿದೆ. ಚಿತ್ರಮೇ 14 ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ
ಮಲಯಾಳಂ ಚಿತ್ರರಂಗದ ಬಹುನಿರೀಕ್ಷಿತ ಆಕ್ಷನ್ ಗ್ರಿಲ್ಲರ್ ಚಿತ್ರದ ಟೀಸರ್ ಇದಾಗಿದೆ. ಟೀಸರಲ್ಲಿ ಕಾಡಿನಲ್ಲಿ ಆನೆಯೊಂದಿಗೆ ನಡೆಸುವ ಸಾಹಸ ದೃಶ್ಯಗಳಲ್ಲಿ ಯಾವುದೇ ಗ್ರಾಫಿಕ್ ಬಳಸದೆ, ನೈಜ ಆನೆಯೊಂದಿಗೆ ಚಿತ್ರೀಕರಿಸಲಾಗಿದೆ. ‘ಕಟ್ಟಾಲನ್’ ಚಿತ್ರ ಅಂಟ್ರಿ ವರ್ಗೀಸ್ ಅವರ ವೃತ್ತಿಜೀವನದ ಅತ್ಯಂತ ಶಕ್ತಿಶಾಲಿ ‘ಮಾಸ್’ ಪಾತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಖ್ಯಾತಿಯ ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೆಚಾ ಖಂಫಕ್ತಿ ನೇತೃತ್ವದಲ್ಲಿ ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.’ಕಾಂತಾರ’ ಮತ್ತು ‘ಮಹಾರಾಜ’ ಖ್ಯಾತಿಯ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್
ದುಸರಾ ವಿಜಯನ್, ತೆಲುಗು ನಟ ಸುನಿಲ್, ಕಬೀರ್ ದುಹಾನ್ ಸಿಂಗ್, ರಾಜ್ ತಿರಂದಾಸು, ಬಾಲಿವುಡ್‌ನ ಪಾರ್ಥ್ ತಿವಾರಿ ಮಲಯಾಳಂ ತಾರೆಯರು: ಜಗದೀಶ್, ಸಿದ್ದಿಕ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ
ಕ್ಯೂಬ್ ಎಂಟಸ್ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರೀಫ್ ಮೊಹಮ್ಮದ್ ನಿರ್ಮಿಸಿರುವ ಈ ಚಿತ್ರ ಶೂಟಿಂಗ್ ಮುಗಿಯುವ ಮುನ್ನವೇ ಸಾಗರೋತ್ತರ ಹಕ್ಕುಗಳಲ್ಲಿ ದಾಖಲೆ ಮೊತ್ತದ ವ್ಯವಹಾರ ಮಾಡಿದೆ. ಇದು ಮಲಯಾಳಂ ಚಿತ್ರರಂಗದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಲಿದೆ

