ಬೆಳಗಾವಿ : ಪೊಲೀಸ್ ಆಯುಕ್ತರಾಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ
ಬೆಳಗಾವಿ : ಬೆಳಗಾವಿ ನಗರದ ಹೊಸ ಪೊಲೀಸ್ ಆಯುಕ್ತರಾಗಿ ಬೋರಲಿಂಗಯ್ಯ ಇಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದಿನ ಪೊಲೀಸ್ ಆಯುಕ್ತರಾಗಿದ್ದ ಕೆ. ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಹೊಸ ಪೊಲೀಸ್ ಆಯುಕ್ತರನ್ನಾಗಿ ಡಾ. ಎಂ.ಬಿ ಬೋರಲಿಂಗಯ್ಯ ಅವರು ನಗರದ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಆಯುಕ್ತ ಕೆ. ತ್ಯಾಗರಾಜನ್ರಿಂದ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಬೆಳಗಾವಿಯಲ್ಲಿ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನಗರ ಪೊಲೀಸ್ ಕಮಿಷನರ್ ತಲೆದಂಡವಾಗಿತ್ತು. ಕೆ. ತ್ಯಾಗರಾಜನ್ ಎತ್ತಂಗಡಿ ಮಾಡಿ ಬೋರಲಿಂಗಯ್ಯ ನೇಮಕ ಮಾಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ನಡೆದಿತ್ತು. ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಸಂಬಂಧಿಸಿದಂತೆ 38 ಜನರು ಬಂಧನ ಆಗಿತ್ತು. ಎಲ್ಲಾ ಗಲಾಟೆಗಳಿಗೆ ಪೊಲೀಸ್ ವೈಫಲ್ಯ ಎಂಬ ಆರೋಪ ಕೇಳಿ ಬಂದಿತ್ತು.