
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಕೈ ನಾಯಕರು

ಬೆಳಗಾವಿ : ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯವನ್ನು ಕಾಂಗ್ರೆಸ್ ಸೇರಿದಂತೆ ಅನೇಕ ನಾಯಕರು ವಿಚಾರಿಸಿದರು.
ಸಚಿವರಾದ ಶಿವಾನಂದ ಪಾಟೀಲ, ಹೆಚ್ ಕೆ. ಪಾಟೀಲ, ರಹೀಮ್ ಖಾನ್, ಶರಣಪ್ರಕಾಶ್ ಪಾಟೀಲ, ಶಾಸಕ ರಾಜೇಗೌಡ, ನಯನಾ ಮೋಟಮ್ಮ, ಮಾಜಿ ಶಾಸಕಿ ಉಮಾಶ್ರಿ, ಅಂಜಲಿ ನಿಂಬಾಳಕರ್,
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಚಲುವರಾಯಸ್ವಾಮಿ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಸಚಿವ ಈಶ್ವರ ಖಂಡ್ರೆ, ಶಾಸಕ ಅನೀಲ್ ಚಿಕ್ಕಮಾದು ಹಾಗೂ ವಿನಯ್ ಗುರುಜಿ ಭೇಟಿನೀಡಿದರು.