ಮೂಡಲಗಿ ಸಾಕ್ಷಿಯ ದುರಂತ ಅಂತ್ಯ : ಪತ್ನಿ ಕೊಂದು ಪರಾರಿ
ಬೆಳಗಾವಿ : ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಶವ ಅಡಗಿಸಿಟ್ಟು ಪತಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಾಮಲದಿನ್ನಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಾಕ್ಷಿ ಆಕಾಶ್ ಕುಂಬಾರ (20) ಕೊಲೆಯಾದ ಮೃತ ದುರ್ದೈವಿ. ಪತ್ನಿಯನ್ನು ಕೊಲೆ ಮಾಡಿರುವ ಆಕಾಶ್ ಕುಂಬಾರ ಪರಾರಿಯಾಗಿರುವ ಆರೋಪಿ. ಕಳೆದ ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಂಬಂಧಿಕರ ಮನೆಗೆ ಹೋಗಿದ್ದ ಆಕಾಶ್ ತಾಯಿ ಬುಧವಾರ ಮನೆಗೆ ವಾಪಸ್ ಆದಾಗ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ,ಸ್ಥಳಕ್ಕೆ ಮೂಡಲಗಿ ಪೊಲೀಸರು ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಭೇಟಿ ನೀಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


