VIDEO : ಸಚಿವ ಉಮೇಶ್ ಕತ್ತಿ ಆಸ್ಪತ್ರೆಯಲ್ಲಿನ ಕೊನೆಗಳಿಗೆಯ ದೃಶ್ಯ
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತಮ್ಮದೇ ವಿಶಿಷ್ಟ ಹೊಂದಿದ್ದ ನೇರ ನಿಷ್ಠುರ ರಾಜಕಾರಣಿ ಎಂದೇ ಖ್ಯಾತಿ ಹೊಂದಿದ್ದ ಅರಣ್ಯ ಹಾಗೂ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ನಿಧನಹೊಂದಿದ್ದಾರೆ. ಇವರ ಕೊನೆ ಗಳಿಗೆಯ ದೃಶ್ಯ ನಿಮ್ಮಮುಂದೆ.
14 ಮಾರ್ಚ 1961 ರಂದು ಜನಿಸಿದ ಉಮೇಶ್ ಕತ್ತಿ ಅವರು ಅವರ ತಂದೆ ವಿಶ್ವನಾಥ ಕತ್ತಿ ಅವರ ನಿಧನದ ನಂಯರ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು.
ಉಮೇಶ ವಿಶ್ವನಾಥ ಕತ್ತಿ
ಜನನ : 14 ಮಾರ್ಚ 1961
ಜಾತಿ : ಲಿಂಗಾಯತ
ರಾಜಕೀಯ ಪ್ರವೇಶ
ತಂದೆಯ ಅಕಾಲಿಕ ಸಾವಿನಿಂದ ರಾಜಕೀಯ ಪ್ರವೇಶ.
1985 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆ ಎನ್ ಪಿ ಪಕ್ಷದಿಂದ ಪ್ರಥಮ ಬಾರಿ ಗೆಲುವು
1989 , 1994 ರಲ್ಲಿ ಜನತಾ ದಳ ಪಕ್ಷದಿಂದ ಗೆಲವು.
1999 ಜನಾತದಳ ಸಂಯುಕ್ತ ಪಕ್ಷದಿಂದ ಗೆಲವು
2004 ರಲ್ಲಿ ಕಾಂಗ್ರೆಸ್ ದಿಂದ ಸ್ಪರ್ಧಿಸಿದ ಕತ್ತಿಗೆ ಸೋಲು
2008 ರಲ್ಲಿ ಜೆಡಿಎಸ್ ಪಕ್ಷದಿಂದ ಗೆಲವು. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ.
2008 ಉಪ ಚುನಾವಣೆ, 2013, 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು.
8 ಭಾರೀ ಹುಕ್ಕೇರಿ ಕ್ಷೇತ್ರದಿಂದ ಉಮೇಶ ಕತ್ತಿ ಗೆಲುವು. 3 ಭಾರೀ ಸಚಿವನಾಗಿ ಕೆಲಸ ಮಾಡಿರೋ ಅನುಭವ.
1994 ದೇವೇಗೌಡ ಕ್ಯಾಬಿನೆಟ್ ಸಕ್ಕರೆ ಮಂತ್ರಿ
1998 ಜೆ ಎಚ್ ಪಟೇಲ್ ಕ್ಯಾಬಿನೆಟ್ ಲೋಕೋಪಯೋಗಿ
2008 ಯಡಿಯೂರಪ್ಪ ಕ್ಯಾಬಿನೆಟ್ ಬಂಧಿಖಾನೆ, ತೋಟಗಾರಿಕೆ ಹಾಗೂ ಕೃಷಿ ಸಚಿವ