ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಡಿಜಿಪಿ ಪ್ರವೀಣ್ ಸೂದ್ ಬಳಿ ದೂರು : ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಮನವಿ
ಬೆಳಗಾವಿ : ಗೋಗಟೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ನೃತ್ಯ ಮಾಡಿದ್ದ ಯುವಕನ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಧ್ಯ ಈ ಘಟನೆಗೆ ಸಂಬಂಧಿಸಿದಂತೆ ಕನ್ನಡಪರ ಯುವ ಹೋರಾಟಗಾರನ ಪೋಷಕರು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೋದ್ ಅವರನ್ನು ಭೇಟಿ ಮಾಡಿದೆ.
ಕನ್ನಡ ಬಾವುಟ ಹಿಡಿದಿದ್ದ ಕಾರಣಕ್ಕೆ ಯುವಕನ ಮೇಲೆ ಕಾಲೇಜಿನಲ್ಲಿ ಹಲ್ಲೆ ನಡೆದಿತ್ತು. ನಂತರ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಅಲ್ಲಿಯೂ ಪೊಲೀಸರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಯುವಕ ಆರೋಪಿಸಿದ್ದ. ಪೊಲೀಸರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾದಾಗ ಐಜಿಪಿ ಮಟ್ಟದ ತನಿಖೆ ನಡೆಸಲು ಎಡಿಜಿಪಿ ಆದೇಶ ನೀಡಿದ್ದರು.
ಸಧ್ಯ ಹಲ್ಲೆಗೊಳಗಾದ ಯುವಕನ ಜೊತೆ ನಿಂತ ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ಅವರ ಪೋಷಕರು
ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೋದ್ ಅವರನ್ನು ಭೇಟಿಮಾಡಿ ತಮ್ಮ ಮಗನಿಗೆ ಜೀವ ಬೆದರಿಕೆ ಇದ್ದು ಸೂಕ್ತ ರಕ್ಷಣೆ ಕೊಡುವಂತೆ ಕೋರಿದ್ದಾರೆ. ಜೊತೆಗೆ ಬೆಳಗಾವಿ ನಗರ ಪೊಲೀಸರ ದೌರ್ಜನ್ಯ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.