Select Page

ಬೆಳಗಾವಿ ಪತ್ರಕರ್ತರಿಗೂ ಭವನ ಕೊಡಿ : ಡಿಸಿಗೆ ಮನವಿ

ಬೆಳಗಾವಿ ಪತ್ರಕರ್ತರಿಗೂ ಭವನ ಕೊಡಿ : ಡಿಸಿಗೆ ಮನವಿ

ಬೆಳಗಾವಿ : ಬೆಳಗಾವಿ ಪತ್ರಕರ್ತರ ಸಂಘದ ಕಚೇರಿಗಾಗಿ ನಿವೇಶನ ಹಾಗೂ ತಾತ್ಕಾಲಿಕವಾಗಿ ಕಟ್ಟಡ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಿಸಿದರು.

ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಬೆಳಗಾವಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಬೆಳಗಾವಿ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದ ನಂತರ ಹಲವಾರು ಸಮಾಜ ಮುಖಿ ಹಾಗೂ ಪತ್ರಕರ್ತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಲ್ಲದೇ ಮಾಧ್ಯಮ ಪಟ್ಟಿಯಲ್ಲಿರುವ ಅಧಿಕೃತ ಪತ್ರಿಕೆಗಳ ಪತ್ರಕರ್ತರನ್ನು ಹೊಂದಿರುವ ಬೆಳಗಾವಿ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳನ್ನು ಮಾಡಲು ಸ್ವಂತ ಕಟ್ಟಡ ಇಲ್ಲದಿರುವುದರಿಂದ ಸಮಸ್ಯೆ ಆಗುತಿದೆ. ಆದ್ದರಿಂದ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇರುವುದರಿಂದ ಈ ಹಿಂದೆ ಜಮೀನು ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ಸಂಧರ್ಭದಲ್ಲಿ ಕೆಳಹಂತದ ಅಧಿಕಾರಿಗಳಿಂದ ಪ್ರಸ್ತಾವನೆಯನ್ನು ಪಡೆದುಕೊಳ್ಳಲಾಗಿದೆ. ಸದ್ಯ ಜಿಲ್ಲಾ ಅಧಿಕಾರಿ ಕಚೇರಿಯಲ್ಲಿ ಕಡತ ಬಾಕಿ ಉಳಿದುಕೊಂಡಿರುವುದರಿಂದ ತಾವುಗಳು ಆದ್ಯತ್ಯ ಮೇರೆಗೆ ಬೆಳಗಾವಿ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು ಮಾಡಬೇಕು ಅವಶ್ಯಕತೆ ಬಿದ್ದಲ್ಲಿ ಸರ್ಕಾರದ ಮೂಲಕವು ಸಂಘದ ಬೇಡಿಕೆ ಸ್ಪಂದಿಸುವ ಕಾರ್ಯ ಮಾಡುವುದಾಗಬೇಕು. ಅಲ್ಲಿಯ ವರೆಗೆ ಸಂಘದ ಕಾರ್ಯ ಚಟುವಟಿಕೆಗೆ ಕಚೇರಿಯನ್ನಾಗಿ ವಾರ್ತಾ ಭವನದ ಕೆಲ ಮಹಡಿಯನ್ನು ನೀಡವುದಾಗಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೇಶ ವಿಜಾಪುರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಗಳಿ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ರಾಜಶೇಖರ ಹಿರೇಮಠ, ಪಾರೇಶ ಭೋಸಲೆ, ಸಂಯೋಜಕಿ ಕೀರ್ತಿ ಕಾಸರಗೋಡು, ಖಜಾಂಚಿ ಹಿರಾಮನಿ ಕಂಗ್ರಾಳಕರ್, ನಿರ್ದೇಶಕರಾದ ಜಗದೀಶ ವಿರಕ್ತಮಠ, ಸುನೀಲ ಪಾಟೀಲ, ಮಂಜುನಾಥ ಕೋಳಿಗುಡ್ಡ, ರವಿ ಗೋಸಾವಿ, ಜಗದೀಶ ಹೊಂಬಾಳೆ, ವಿಶ್ವನಾಥ ದೇಸಾಯಿ, ಅರುಣ ಯಳ್ಳುರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!