
ಬದಲಾವಣೆ ಬೆಳಕು ಫೌಂಡೇಶನ್ ಸಾಮಾಜಿಕ ಕಾರ್ಯ ಶ್ಲಾಘನೀಯ : ಮೃಣಾಲ್ ಹೆಬ್ಬಾಳ್ಕರ್

ಹಿರೇಬಾಗೇವಾಡಿ : ಸಮಾಜದ ಸಂಕಷ್ಟಕ್ಕೆ ಬದಲಾವಣೆ ಬದುಕು ಫೌಂಡೇಶನ್ ಸದಸ್ಯರು ಹಗಲಿರುಳು ದುಡಿಯುತ್ತಿರುವುದು ಶ್ಲಾಘನೀಯ ಕಾರ್ಯ. ಕೊವಿಡ್ ಸಂದರ್ಭದಿಂದ ಈವರೆಗೆ ಸಂಸ್ಥೆ ಅವಿರತ ಕಾರ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮೃನಾಲ್ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಹಿರೇಬಾಗೇವಾಡಿಯ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ದಿ. ಪುನೀತ್ ರಾಜಕುಮಾರ್ ಸ್ಮರಣಾರ್ಥ ಬದಲಾವಣೆ ಬೆಳಕು ಫೌಂಡೇಶನ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಇವರು. ಸಮಾಜದ ಸಂಕಷ್ಟಕ್ಕೆ ಬದಲಾವಣೆ ಬೆಳಕು ಫೌಂಡೇಶನ್ ಅದ್ಬುತ ಕೆಲಸ ಮಾಡುತ್ತಿದೆ. ಶಿಕ್ಷಣ ಹಾಗೂ ಆರೋಗ್ಯದ ದೃಷ್ಟಿಯಿಂದ ಇವರ ಕಾರ್ಯ ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಪರವಾಗಿ ನಾವಿದ್ದೇವೆ ಎಂದು ಮೃನಾಲ್ ಹೆಬ್ಬಾಳ್ಕರ್ ಹೇಳಿದರು.

ಬದಲಾವಣೆ ಬೆಳಕು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಹಿರಟ್ಟಿ ಮಾತನಾಡಿ. ದಿ ಪುನೀತ್ ರಾಜಕುಮಾರ ಬದುಕಿನುದ್ದಕ್ಕೂ ಸಮಾಜದ ಕಣ್ಣುಗಳಂತೆ ಇದ್ದು ಬಡವರ ಸಂಕಷ್ಟಕ್ಕೆ ನೆರವಾದವರು. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಪುಸ್ತಕ ವಿತರಣೆ ಮಾಡುತ್ತಿದ್ದೇವೆ ಎಂದರು. ರಸ್ತೆ ಅಪಘಾತ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ತುರ್ತಾಗಿ ರಕ್ತ ಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ಜನರ ಜೀವ ಉಳಿಸುವ ದೃಷ್ಟಿಯಿಂದ ಸಂಸ್ಥೆಯು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ, ನೂರಾರು ಯುವಕರು ರಕ್ತದಾನ ಮಾಡಿದ್ದು ಸಂತಸ ತಂದಿದೆ ಎಂದು ಶಿವು ಹಿರಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಅಪ್ಟೆಕ್ ಸಂಸ್ಥೆ ಎಂ.ಡಿ ವಿನೋದ ಬಾಮನೆ, ಜ್ಯೋತಿ ಬಾಮನೆ, ಮುಖಂಡರಾದ ಸುರೇಶ ಇಟಗಿ, ಸ್ವಾತಿ ಇಟಗಿ, ಅಡವೇಶ ಇಟಗಿ, ಸದ್ದಾಂ ನಧಾಪ್, ಬಸನಗೌಡ ಪಾಟೀಲ್, ಎಫ್ ಎಸ್ ಪಾಟೀಲ್. ಬದಲಾವಣೆ ಬೆಳಕು ಫೌಂಡೇಶನ್ ಸದಸ್ಯರಾದ ದಾನಿಯಲ್ ಗುಂಟು, ಸಚೀನ್ ನಾಯಕ, ಗೀತಾ ಹಿರಟ್ಟಿ, ನೀತಾ ಪಟ್ಟನಶೆಟ್ಟಿ, ಅಕ್ಷತಾ ನಾಯಕ್, ಅಕ್ಷತಾ ಬೋಡಕಿ, ಅಕ್ಷ್ಮೀ ಇಟಗಿ, ಸವಿತಾ ನಾಯಕ, ಲಕ್ಷ್ಮೀ ಬಾನಿಕಟ್ಟಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
