Select Page

Advertisement

ನಾಲ್ವರ ಪ್ರಾಣ ಬಲಿ ಪಡೆದ ಸಿಮೆಂಟ್ ಲಾರಿ : ಕಣ್ಣೀರಲ್ಲಿ ಎಎಸ್ಐ ಕುಟುಂಬ

ನಾಲ್ವರ ಪ್ರಾಣ ಬಲಿ ಪಡೆದ ಸಿಮೆಂಟ್ ಲಾರಿ : ಕಣ್ಣೀರಲ್ಲಿ ಎಎಸ್ಐ ಕುಟುಂಬ

ಬೆಳಗಾವಿ : ಅದೆಷ್ಟೋ ಕನಸು ಹೊತ್ತು ಸಾಗಿದ್ದ ಕುಟುಂಬ,  ಬಾಡಿಗೆ ಕಾರಿನಲ್ಲಿ ಸಂಚರಿಸಿ ಗೂಡು ಸೇರುವ ತವಕದಲ್ಲಿದ್ದವರಿಗೆ ಯಮ ಸ್ವರೂಪಿಯಾಗಿ ಬಂದಿದ್ದು ಸಿಮೆಂಟ್ ತುಂಬಿದ್ದ ಲಾರಿ.‌

ಹೌದು ಮಹಾಲಯ ಅಮವಾಸೆಯ‌ ದಿನದಂದು ಲಾರಿ, ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ, ಕಾರು ಹಾಗೂ ದ್ವಿಚಕ್ರ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ  ಘಟನೆ ಭಾನುವಾರ ಸವದತ್ತಿ ತಾಲೂಕಿನ ಹಲಕಿ- ಬುದಿಗೊಪ್ಪ ಕ್ರಾಸ್ ಬಳಿ ಬೆಳಗಾವಿ-ಬಾಗಲಕೋಟ ಹೆದ್ದಾರಿ ಮೇಲೆ ನಡೆದಿದೆ.

ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.‌ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ಎಎಸ್‌ಐ ಹಲಕಿ ಅವರ ಪತ್ನಿ ರುಕ್ಮಿಣಿ ಹಲಕಿ (೪೮), ಪುತ್ರಿ ಅಕ್ಷತಾ ಹಲಕಿ (೨೨), ಕಾರು ಚಾಲಕ ಬೆಳಗಾವಿಯ ನಿಖಿಲ್ ಕದಂ (೨೪) ಹಾಗೂ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ಹನುಮವ್ವ ಚಿಪ್ಪಲಕಟ್ಟಿ (೬೮) ಮೃತಪಟ್ಟಿರುವ ದುರ್ದೈವಿಗಳು.

ಗಾಯಾಳುಗಳು ಗದಿಗೆಪ್ಪ ಬಸಪ್ಪ ಚಿಪ್ಪಲಕಟ್ಟಿ,(೨೨),ರೂಪಾ ಗದಿಗೆಪ ಚಿಪ್ಪಲಕಟ್ಟಿ, (೨೦)ಪೂಜಾ ಮಲ್ಲಪ್ಪ ಹಲಕಿ (೨೧) ಮುತ್ತುರಾಜ ಮಲ್ಲಪ್ಪ ಹಲಕಿ (೧೩) ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ, ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಡೆಗೆ ಬಾಡಿಗೆ ಕಾರಿನಲ್ಲಿ ರುಕ್ಮಿಣಿ, ಪುತ್ರಿ ಅಕ್ಷತಾ ಹಲಕಿ ಪ್ರಯಾಣ ಬೆಳೆಸಿದ್ದರು. ಲೋಕಾಪುರಿಂದ ಗೋವಾದ ಕಡೆಗೆ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿ, ಸವದತ್ತಿ ತಾಲೂಕಿನ ಹಲಕಿ- ಬುದಿಗೊಪ್ಪ ಕ್ರಾಸ್ ಬಳಿ ಬೆಳಗಾವಿ-ಬಾಗಲಕೋಟ ಹೆದ್ದಾರಿಯಲ್ಲಿ ಕಾರ ಹಾಗೂ ಲಾರಿ ಮುಖಾಮುಖಿ ಡಿಕ್ಕಿಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ ಸ್ವಲ್ಪ ಹಿಂದೆ ಹೋಗಿದೆ. ಇದೇ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಮೇಲೆ ತೆರಳುತ್ತಿದ್ದ ಗದಿಗೆಪ್ಪ ಹಾಗೂ ಹನುಮವ್ವ ಚಿಪ್ಪಲಕಟ್ಟಿ ಎಂಬುವರು ಕಾರಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ಹನುಮವ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗದಿಗೆಪ್ಪ ಚಿಪ್ಪಲಕಟ್ಟಿ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ವೇಳೆ ಕಾರು ಚಾಲಕ ನಿಖಿಲ್ ಕದಂ ಎಂಬಾತನಿಗೂ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಕಾರು ನಜ್ಜು ಗುಜ್ಜಾಗಿದ್ದರಿಂದ ಮೃತದೇಹಗಳು ಸಿಲುಕಿಕೊಂಡಿದ್ದು, ಶವಗಳನ್ನು ಹೊರ ತೆಗೆಯಲು ಹರಸಾಹಸಪಟ್ಟರು.

ಘಟನಾ ಸ್ಥಳಕ್ಕೆ ಎಸ್ಪಿ ಡಾ. ಸಂಜೀವ ಪಾಟೀಲ, ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ‌ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!