Instagram ಹ್ಯಾಕ್ ಆಗುವುದನ್ನು ತಪ್ಪಿಸುವುದು ಹೇಗೆ?
ಇತ್ತೀಚಿನ ಕೆಲವು ತಿಂಗಳುಗಳಿಂದ ಇನ್‌ಸ್ಟಾಗ್ರಾಮ್ ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿನ ಚಿತ್ರಗಳನ್ನು ಬಳಸಿಕೊಂಡು ಬಿಟ್ ಕಾಯಿನ್ ಮಾರುಕಟ್ಟೆ ಜಾಲಕ್ಕೆ ಸೆಳೆಯುವ ಮೆಸೇಜ್‌ಗಳನ್ನು ಕಳುಹಿಸಲಾಗುತ್ತದೆ. ಇದು ಆ ಖಾತೆಯಲ್ಲಿನ ಅಷ್ಟೂ ಫಾಲೋವರ್ಸ್‌ಗಳಿಗೆ ತಲುಪುವಂತೆ ಹ್ಯಾಕರ್‌ಗಳು ಮಾಡುತ್ತಾರೆ.
ಇನ್ನೊಬ್ಬರ ಖಾತೆಯನ್ನು ಬಳಸಿಕೊಂಡು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ವಿದೇಶಿ ಜಾಲ ಇದು. ಕೆಲವೊಮ್ಮೆ ಖಾತೆಯನ್ನು ಹ್ಯಾಕ್ ಮಾಡಿ ಬಳಿಕ ಅದರ User Name ಬದಲಾಯಿಸಿ ಬೇರೊಬ್ಬರಿಗೆ ಮಾರಾಟವೂ ಮಾಡಲಾಗುತ್ತದೆ.
ಹ್ಯಾಕರ್‌ಗಳ ಕೈಯಿಂದ ಜಾಲತಾಣಗಳನ್ನು ರಕ್ಷಿಸಿಕೊಳ್ಳುವ ಹಲವು ವಿಧಾನಗಳ ಪೈಕಿ ಪ್ರಮುಖವಾದುದನ್ನು ಇಲ್ಲಿ ನೀಡಲಾಗಿದೆ.
-ಸೋಷಿಯಲ್ ಮೀಡಿಯಾ ಖಾತೆಗಳಿಗೆ ಬಲಿಷ್ಠ ಪಾಸ್‌ವರ್ಡ್‌ಗಳು ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ ಖಾತೆದಾರರನ ಹೆಸರು apple ಎಂದಿದ್ದರೆ, Apple@12345, apple12345 ಇಂಥ ಸುಲಭ ಮತ್ತು ಅತೀ ಸಾಮಾನ್ಯ ಪಾಸ್‌ವರ್ಡ್‌ಗಳು ಯಾವುದೇ ಕಾರಣಕ್ಕೆ ಬಳಸಬೇಡಿ. ಇದರ ಬದಲು Apl@myph1e!# ಇಂಥ ಮಾದರಿಯಲ್ಲಿ ದೀರ್ಘವಾಗಿರುವ ಹತ್ತು ಹಲವು ಕಠಿಣ ಪಾಸ್‌ವರ್ಡ್‌ಗಳು ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೆ ನಿಮ್ಮ ಫೋನ್ ನಂಬರ್/ ಹುಟ್ಟಿದ ದಿನಾಂಕ ಇಂಥ ಸುಲಭ ಪಾಸ್‌ವರ್ಡ್ ಇಡಬೇಡಿ. ಹ್ಯಾಕ್ ಮಾಡುವ ಸಂದರ್ಭ ಇವೆಲ್ಲ ಅಂಶವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ.
-ಹ್ಯಾಕ್ ಮಾಡಿದ ಬಳಿಕ ಹ್ಯಾಕರ್‌ಗಳು ಮಾಡುವ ಮೊದಲ ಕೆಲಸ ಎಂದರೆ ಆ ಖಾತೆಗೆ ನೀಡಲಾದ Mail IDಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ. ಮತ್ತೆ ಫೋನ್ ನಂಬರ್ ಬದಲಾಯಿಸಿ ಅಕೌಂಟ್ ಅನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಹ್ಯಾಕ್ ಆದ ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಾಯಿಸಲು ನೀವು ಪ್ರಯತ್ನ ಪಟ್ಟರೆ ಅದರ OTPಗಳು ಹ್ಯಾಕರ್‌ಗಳ ಫೋನ್ ನಂಬರ್ ಮತ್ತು Mail IDಗೆ ರವಾನೆಯಾಗುತ್ತದೆ. (ಹೆಚ್ಚಿನ ಸಂದರ್ಭ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ನಂಬರ್‌ಗಳನ್ನು ಈ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತದೆ)
ಹೀಗಾಗಿ ಇಂತಹ ಬೆಳವಣಿಗೆಗಳು ಕಂಡುಬಂದರೆ ಹೀಗೆ ಮಾಡಿ. security@mail.instagram.com ಗೆ ನಿಮ್ಮ ಖಾತೆ ಹ್ಯಾಕ್ ಆಗಿರುವುದಾಗಿ Mail ಮೂಲಕ ಗಮನಕ್ಕೆ ತನ್ನಿ. ನಿಮ್ಮ ಪ್ರಾಥಮಿಕ ಮೇಲ್ ಐಡಿಯಿಂದ ಅಂದರೆ ನಿಮ್ಮ ಖಾತೆಗೆ ನೀಡಲಾಗಿದ್ದ Mail IDಯಿಂದಲೇ ಕಳುಹಿಸಬೇಕು. ನೀವು ಮೇಲ್ ಮಾಡಿದ ಕೆಲವು ತಾಸಿನೊಳಗೆ ನಿಮ್ಮ ಮೇಲ್‌ಗೆ ಹ್ಯಾಕ್ ಆದ ಖಾತೆಯ Join ಲಿಂಕ್ ದೊರೆಯುತ್ತದೆ. ಅದನ್ನು ಬಳಸಿಕೊಂಡು ಖಾತೆಯನ್ನು ತತ್‌ಕ್ಷಣ Password ಬದಲಾಯಿಸಿ ಮತ್ತೆ ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು.
ಈ ವೇಳೆ ನಿಮ್ಮ ಫೋನ್ ನಂಬರ್ ಅಪ್‌ಡೇಟ್ ಮಾಡಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ Instagramನ settings> security> Two-Factor authentication ಆಯ್ಕೆಯಲ್ಲಿ Authentication app, WhatsApp ಅಥವಾ text message ಅನ್ನು Enable ಮಾಡಿಕೊಳ್ಳಿ. Authentication App ಇದ್ದರೆ ಹೆಚ್ಚು ಸೂಕ್ತ. ಗೂಗಲ್‌ನವರ App/Duo mobile App ಅಥವಾ Microsoft Authenticator App ಬಳಸಿ ನಿಮ್ಮ ಖಾತೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಇದನ್ನು enable ಮಾಡಿಕೊಂಡರೆ ನಿಮ್ಮ ಖಾತೆ ಇನ್ನೆಲ್ಲೋ ಲಾಗಿನ್ ಅಥವಾ Password ಬದಲಾವಣೆಯಾದರೆ ಈ Authenticator App ನಲ್ಲಿ Run ಆಗುತ್ತಿರುವ 6 ಅಂಕಿಗಳ ಕೋಡ್ ಅನ್ನು ನಮೂದಿಸಿದರೆ ಮಾತ್ರ ಲಾಗಿನ್ ಆಗಲು ಸಾಧ್ಯ. ಹೀಗಾಗಿ ಈ ಆಯ್ಕೆ ಹೆಚ್ಚು ಸುರಕ್ಷಿತ.
ಇನ್‌ಸ್ಟಾಗ್ರಾಮ್ ಮೂಲಕ ನಿಮ್ಮ ಮೊಬೈಲ್ ನಂಬರ್‌ಗಳು ಹ್ಯಾಕರ್‌ಗಳ ಕೈಸೇರಿರುವ ಕಾರಣ ವಾಟ್ಸ್‌ಆಪ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ. ʼನಿಮ್ಮ ಖಾತೆಗಳು ನಿಮಗೆ ಮತ್ತೆ ಬೇಕಾದರೆ ವಿಡಿಯೋ ಕಾಲ್ ಮಾಡಿ, ನಿಮ್ಮ ಚಿತ್ರಗಳನ್ನು ಕಳುಹಿಸಿ..ʼ ಮೊದಲಾದ ಮೆಸೇಜ್‌ಗಳು ಬರುತ್ತವೆ. ಇವ್ಯಾವುದನ್ನೂ Entertain ಮಾಡದೇ ಇರುವುದು ಉತ್ತಮ ನಡೆ.
ನಿಮ್ಮ #instagram ಖಾತೆಯನ್ನು ಹ್ಯಾಕರ್‌ಗಳ ಕೈಯಿಂದ ರಕ್ಷಿಸಿಕೊಳ್ಳಲು Two-Factor authentication ಅನ್ನು ಈ ಕ್ಷಣವೇ Enable ಮಾಡಿಕೊಳ್ಳಿ.