
ವಿಜಯ ವೈಸ್ ಆಫ್ ಕರ್ನಾಟಕ ಸ್ಪರ್ಧೆಯ ಅಂತಿಮ ಘಟ್ಟಕ್ಕೆ ಗೋಕಾಕ್ ಕುವರಿ

ಗೋಕಾಕ : ಇಲ್ಲಿನ ವೈದ್ಯ ದಂಪತಿ ಡಾ.ವಿಲಾಸ ಕಲ್ಲೋಳ್ಳಿ ಮತ್ತು ಹೇಮಾ ಕಲ್ಲೋಳ್ಳಿ ಅವರ ಮಗಳು ಪೋಬ್ಸ್ ಅಕ್ಯಾಡಮಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ
ಅರಣಾ ವಿಲಾಸ ಕಲ್ಲೋಳ್ಳಿ ಇವಳು ಇತ್ತೀಚೆಗೆ ಹಾವೇರಿಯಲ್ಲಿ ನಡೆದ ವಿಜಯ ವೈಸ್ ಆಫ್ ಕರ್ನಾಟಕ” ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ.
ವಿಜಯ ವೈಸ್ ಆಫ್ ಕರ್ನಾಟಕ ಗಾಯನ ಸ್ವರ್ಧೆಯ ಅಂತಿಮ ಹಂತದ ಸ್ವರ್ಧೆಯು ಸೆಪ್ಟೆಂಬರ್ ೧೮ ರಂದು ಶಿವಮೊಗ್ಗದಲ್ಲಿ ನಡೆಯಲಿದ್ದು, ಕುಮಾರಿ ಅರುಣಾ ಕಲ್ಲೋಳ್ಳಿ ಇವಳು ಗೆದ್ದು
ಬರಲಿ ಎಂದು ಪೋಬ್ಸ್ ಅಕ್ಯಾಡಮಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಹಾರೈಸಿದ್ದಾರೆ.