
ಬೇರೊಬ್ಬನ ಬೈಕ್ ಮೇಲೆ ಹೆಂಡ್ತಿ ಸವಾರಿ ; ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

ಬೆಳಗಾವಿ : ಅನ್ಯ ವ್ಯಕ್ತಿಯ ಜೊತೆ ತನ್ನ ಪತ್ನಿ ಬೈಕ್ ಸವಾರಿ ಮಾಡುವ ಸಂದರ್ಭದಲ್ಲಿ ಪತಿ ಮಚ್ಚು ಬೀಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಮೂಡಲಗಿ ತಾಲೂಕಿನ ಲಕ್ಷ್ಮೀಶ್ವರ ಗ್ರಾಮದಲ್ಲಿ ನಡೆದಿದೆ.
ಮೌಲಾಸಾಬ್ ಮೊಮಿನ್ ( 28 ) ಮೃತಪಟ್ಟ ವ್ಯಕ್ತಿ. ಅಮೋಘ ಡವಳೇಶ್ವರ ಎಂಬ ವ್ಯಕ್ತಿ ಲಾಂಗ್ ನಿಂದ ಹಲ್ಲೆ ನಡೆಸಿದ್ದು ಮೌಲಾಸಾಬ್ ಸ್ಥಾಲದಲ್ಲೇ ಮೃತಪಟ್ಟಿದ್ದಾನೆ. ಸೋಮವಾರ ಬೆಳಿಗ್ಗೆ ಅಮೋಘ ಡವಳೇಶ್ವರ ಎಂಬಾತನ ಪತ್ನಿ ಶಿಲ್ಪಾ ಮತ್ತು
ಮೌಲಾಸಾಬ್ ಮೊಮಿನ್ ಎಂಬುವವರು ಬೈಕ್ ಮೇಲೆ ಸಂಚರಿಸುತ್ತಿದ್ದರು.
ಈ ಸಂದರ್ಭದಲ್ಲಿ ಆರೋಪಿ ಅಮೋಘ ಮಚ್ಚಿನಿಂದ ಇಬ್ಬರ ಮೇಲೆ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಮೌಲಾಸಾಬ್ ಗಂಭೀರವಾಗಿ ಗಾಯಗೊಂಡು ಸ್ಥಳದಲದಲೇ ಮೃತಪಟ್ಟಿದ್ದು ಶಿಲ್ಪಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.