ಚನ್ನಮ್ಮನ ಕಿತ್ತೂರು: ಸಮೀಪದ ಅಂಬಡಗಟ್ಟಿ ಗ್ರಾಮದ ಶತಾಯುಷಿ ಇಮಾಂಬಿ ಹಸನಸಾಬ ಶಿಲೇದಾರ (100) ಭಾನುವಾರ ನಿಧನರಾಗಿದ್ದಾರೆ.

ಮೃತರಿಗೆ ಕಾಂಗ್ರೆಸ್‌ ಮುಖಂಡ ಹಬೀಬ್‌ ಶಿಲೇದಾರ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವಿದೆ.

ನಿಧನಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ – ಸತೀಶ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.