
ಬೈಲಹೊಂಗಲದಲ್ಲಿ ಚೆಲುವಣ್ಣನ ಟ್ರ್ಯಾಕ್ಟರ್ ಸವಾರಿ

ಬೆಳಗಾವಿ : ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬುಧವಾರ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ರೈತರ ತೋಟದಲ್ಲಿ ಟ್ರ್ಯಾಕ್ಟರ್ ಸವಾರಿ ಮಾಡುವ ಮೂಲಕ ಗಮನಸೆಳೆದರು.
ತಾಲ್ಲೂಕಿನ ನಯಾನಗರದಲ್ಲಿ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿರುವ ರೈತ ಪಕೀರಪ್ಪ ಅರೋಳಿ ಅವರ
ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಡು ಸಾಕಾಸಿಕೆ,ಮೇವು ಬೆಳೆ ತಾಕು,ಕೃಷಿ ಹೊಂಡ ,ಎರೆಹುಳು ಗೊಬ್ಬರ ತೊಟ್ಟಿ, ರೇಷ್ಮೆ ಬೆಳೆ ತಾಕುಗಳಿ ಸಚಿವರು ಭೇಟಿ ನೀಡಿದರು.
ಶಾಸಕರಾದ ಮಹಾಂತೇಶ್ ಕೌಜಲಗಿ, ಕಿತ್ತೂರು ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್,ನಿರ್ದೇಶಕರಾದ ಡಾ ಜಿ.ಟಿ. ಪುತ್ರ ಹಾಜರಿದ್ದರು
ಮಾಜಿ ಸಚಿವರಾದ ಶಿವಾನಂದ ಕೌಜಲಗಿ ಅವರನ್ನು ಭೇಟಿಮಾಡಿ ಆಶೀರ್ವಾದ ಪಡೆದ ಸಚಿವರು

ಕೃಷಿ ಸಚಿವರಾದ ಎನ್ . ಚಲುವರಾಯಸ್ವಾಮಿ ಅವರು ಇಂದು ಬೈಲಹೊಂಗಲದಲ್ಲಿ ಮಾಜಿ ಸಚಿವರಾದ ಶಿವಾನಂದ ಕೌಜಲಗಿ ಅವರನ್ನು ಭೇಟಿಮಾಡಿ ಆಶೀರ್ವಾದ ಪಡೆದು ,ಯೋಗ ಕ್ಷೇಮ ವಿಚಾರಿಸಿದರು.
ಇದೇ ವೇಳೆ ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಅಂದು ಸಚಿವರಾದಗಿದ್ದ ಶಿವಾನಂದ ಕೌಜಲಗಿ ಅವರು ನೀಡಿದ ಸಹಕಾರ ,ಪ್ರೋತ್ಸಾಹ, ಮಾರ್ಗದರ್ಶನವನ್ನು ಕೃಷಿ ಸಚಿವರು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.
ಇದೇ ವೇಳೆ ಹಾಲಿ ಶಾಸಕರು ಹಾಗೂ ಶಿವಾನಂದ ಕೌಜಲಗಿ ಅವರ ಪುತ್ರ ಮಹಾಂತೇಶ್ ಕೌಜಲಗಿ ಅವರು ಸಹ ಉಪಸ್ಥಿತರಿದ್ದರು