ಮನೆ ಮೇಲೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ, ಓರ್ವ ಮಹಿಳೆ ಸಾವು
ಬೈಲಹೊಂಗಲ : ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಮನೆಯ ಮೇಲೆ ಉರಳಿ ಬಿದ್ದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು ಸುಮಾರು ಐದಾರು ಜನ ಗಾಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ಶಿಗೀಹಳ್ಳಿ.ಕೆ.ಎಸ್.ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮರಿಕಟ್ಟಿ ಗ್ರಾಮದಿಂದ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ಹೋಗುತ್ತಿದ್ದ ವೇಳೆ ಶಿಗಿಹಳ್ಳಿ ಗ್ರಾಮದ ಬಳಿ ಇರುವ ತಿರುವಿನಲ್ಲಿದ್ದ ಅಜ್ಪಪ್ಪ ಬಡಿಗೇರ ಎಂಬುವರ ಮನೆಯ ಮೇಲೆ ಉರಳಿದೆ. ಈ ದುರ್ಘಟನೆಯಲ್ಲಿ ಪುಲಾರಕೊಪ್ಪ ಗ್ರಾಮದ ಓರ್ವ ಅಜ್ಜಿ ಸ್ಥಳದಲ್ಲಿಯೇ ಅಸುನಿಗಿದ್ದಾಳೆ. ಐದಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಿಗಿಹಳ್ಳಿ ಹಾಗೂ ಮರೀಕಟ್ಟಿ ಗ್ರಾಮಸ್ಥರು ಘಟನಾ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡವರನ್ನು ಸ್ಥಳಿಯರ ನೆರವಿನೊಂದಿಗೆ ಹಿರೇಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಚಾವಣಿ ಕೇಳಗೆ ಸಿಲುಕಿ ಆರು ಕುರಿಗಳು ಅಸುನೀಗಿವೆ.
ಗ್ರಾಪಂ ಸದಸ್ಯರಾದ ಮಂಜು ಕುರಿ ವಿಠ್ಠಲ ತಳವಾರ ಹಾಗೂ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪಿ.ವಿ.ಸಾಲಿಮಠ ಹಾಗೂ ಇನ್ನಿತರ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.