ಶಾಸಕ ಅಭಯ್ ಪಾಟೀಲ್ ಸೈಟ್ ಕಬಳಿಸಿದ ಖದೀಮರು
ಬೆಂಗಳೂರು : ಸಾಮಾನ್ಯವಾಗಿ ಬಡವರು ಖರೀದಿಸಿದ್ದ ಸೈಟ್ ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡುವಂತಹ ಪ್ರಕರಣ ಸಾಮಾನ್ಯ. ಆದರೆ ಸ್ವತಃ ಶಾಸಕರದ್ದೇ ಸೈಟ್ ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಪ್ರಕರಣ ದಾಖಲಾಗಿದೆ.
2008 ರಲ್ಲಿ ಲೊಟ್ಟೆಗೊಲ್ಲಹಳ್ಳಿಯ ರಾಜಮಹಲ್ ವಿಲಾಸದ ಎರಡನೇ ಹಂತದಲ್ಲಿ 50×80 ಅಳತೆಯ ಜಿ ಕೆಟಗರಿ ನಿವೇಶನ ಮುಂಜೂರು ಮಾಡಲಾಗಿದೆ. ಶಾಸಕ ಅಭಯ್ ಪಾಟೀಲ್, ಗೂಳಿಹಟ್ಟಿ ಶೇಖರ್ ಮತ್ತು ಎಂ.ಪಿ ನರೇಂದ್ರಸ್ವಾಮಿ ಮೂವರಿಗೂ ನಿವೇಶನ ಹಂಚಿಕೆಯಾಗಿದೆ.
ಆದರೆ ಖದೀಮರು ನಖಲಿ ದಾಖಲೆ ಸೃಷ್ಟಿಸಿ ಶಾಸಕರಿಗೆ ಹಂಚಿಕೆಯಾಗಿದ್ದ ಸೈಟ್ ಅನ್ನು ಕಬಳಿಕೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಶಾಸಕ ಗೂಳಿಹಟ್ಟಿ ಶೇಕರ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹಲವರ ಮೇಲೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಯುತ್ತಿದೆ.