ತಾಲೂಕಾ ಮಟ್ಟದ ಯುವ ಸಪ್ತಾಹ ಕಾರ್ಯಕ್ರಮ ಆಯೋಜನೆ
ಬೆಳಗಾವಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಬೆಳಗಾವಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಮತ್ತು ಪಟ್ಟಣದ ಸ್ಥಳೀಯ ಡೈಮಂಡ್ ಕ್ಲಬ್ ಆರ್ಟ್ ಸ್ಪೋರ್ಟ್ಸ್ ಅಥಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಅಂಗವಾಗಿ ಅಥಣಿ ತಾಲೂಕಾ ಮಟ್ಟದ ಯುವ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಆನಂದ ಮಟಗಾರ , ಸದಸ್ಯರಾದ ಮಲ್ಲಪ್ಪ ಗದ್ಯಾಳ, ಅರ್ಜುನ್ ಪವಾರ, ಸದಾಶಿವ್ ಕೊಂಪಿ ,ಏಕನಾಥ್ ಕುಂಬಾರ್ ,ಲಾಲಸಾಬ್ ಮುಜಾವರ್ ,ರಾಜಶ್ರೀ ಮಟಗಾರ ,ಮುರುಗೇಶ್ ಸೇರಿದಂತೆ ಅನೇಕರು ಭಾಗವಹಿಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದರು.