
ಕಾರ್ಖಾನೆಗೆ ಬೆಂಕಿ ; ಲಕ್ಷಾಂತರ ರೂ. ಹಾನಿ

ಬೈಲಹೊಂಗಲ: ಸಮೀಪದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಬಯೋ ಗ್ಯಾಸಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ.ಗಳ ಹಾನಿಯಾದ ಘಟನೆ ಸೋಮವಾರ ಸಂಜೆ ಜರುಗಿದೆ.
ಕಾರ್ಖಾನೆಯಲ್ಲಿರುವ ಬಯೋ ಗ್ಯಾಸಗೆ ಬೆಂಕಿ ತಗಲಿದ್ದರಿಂದ ಮುಗಿಲೆತ್ತರಕ್ಕೆ ಕೆನ್ನಾಲೆಗಳು ಜ್ವಾಲೆ ಹರಡಿದ್ದವು. ಗಾಳಿ ಹೆಚ್ಚಾಗಿದ್ದರಿಂದ ಬೆಂಕಿ ನುಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಮಿಕರು ಹರಸಾಹಸಪಟ್ಟರು.
ಬೈಲಹೊಂಗಲ, ಕಿತ್ತೂರು, ಧಾರವಾಡದಿಂದ ಆಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಸುಮಾ ಗೋರಬಾಳ, ಗಂಗಾಧರ ಹಂಪನ್ನವರ,ಆಗ್ನಿ ಶಾಮಕ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ದೊಡವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.