Select Page

ಸೊಗಲ ಸೋಮೇಶ್ವರನ ವೈಭವದ ರಥೋತ್ಸವ ಇಂದು…!

ಸೊಗಲ ಸೋಮೇಶ್ವರನ ವೈಭವದ ರಥೋತ್ಸವ ಇಂದು…!

ಯರಗಟ್ಟಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕ್ಷೇತ್ರ ಸೊಗಲಕ್ಕೆ ಋಷಿ ಮುನಿಗಳು ತಪಗೈದು, ಶಿವ ಪಾರ್ವತಿಯರು ಬಾಸಿಂಗ ಕಟ್ಟೊಕೊಂಡು ಇರುವ ಇಲ್ಲಿಯ ಶಿಲಾ ಮೂರ್ತಿ ಕರ್ನಾಟಕದಲ್ಲಿ ಪ್ರಥಮವಾಗಿದೆ ಈ ಕ್ಷೇತ್ರಕ್ಕೆ ಬಂದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದರೆ ಜೀವನ ಪಾವನ.

ಮಾ. 10 ರಂದು ಸೋಮವಾರ ಪಾರ್ವತಿ ಪರಮೇಶ್ವರ ಅಕ್ಷತಾರೋಪ ಕಾರ್ಯಕ್ರ ಜರುಗಿತು. ಮಾ. 11 ರಂದು ಮಂಗಳವಾರ ಸೊಗಲ ಸೋಮೇಶ್ವರನಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಶಿವಭಜನೆ, ಶಿವಕಿರ್ತನೆ ಮತ್ತು ಶ್ರೀ ನಷ. ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಲಿಂಗಧೀಕ್ಷೇ ಅಯ್ಯಾಚಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಂತರ ಮಹಾಪ್ರಸಾದ ಜರಗುವವು ಸಂಜೆ 5 ಘಂಟೆಗೆ ಸಕಲ ಹರ ಗುರು ಚರ ಮೂರ್ತಿಗಳ ಆಶೀರ್ವಾದಗಳೊಂದಿಗೆ ಜನಪ್ರತಿ ನಿಧಿಗಳು, ಹೊಸೂರಿನ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲದ ಮೂರು ಸಾವಿರ ಮಠದ ನೀಲಕಂಠಪ್ರಭು ಸ್ವಾಮೀಜಿಯವರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ರಥೋತ್ಸವ ಜರುಗುವುದು.

ಪ್ರತಿ ವರ್ಷ ಜನೇವರಿಯಲ್ಲಿ ಈ ಕ್ಷೆತ್ರಕ್ಕೆ 14 ಮತ್ತು 15ರಂದು ಕರ್ನಾಟಕದ ಸುತ್ತಮುತ್ತಲಿನ ಜನ ಸಮೂಹ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ 120 ಅಡಿ ಮತ್ತು 60 ಅಡಿಯಿಂದ ಮೈದುಂಬಿ ಧುಮುಕುವ ಜಲಪಾತದ ಅಡಿ ಸಾಗಿ ಎಳ್ಳು, ಎಣ್ಣೆ ಅರಿಶಿನ ಕೂಡಿಸಿ ಕಲಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕರ್ಮ ಪಾಪಗಳು ಕಳೆದು ಹೊಸ ಜೀವನ ರೂಪಿಸುವುದೆಂದು ಸಾರ್ವತ್ರಿಕ.

ಈ ಭಾಗದ ಜನರ ಕಣ್ಮನ ಸೆಳೆಯುವ ದಕ್ಷೀಣ ಕಾಶಿಯಂದೆ ಬನ್ನಿಸಲಾದ ಸಾಕ್ಷಾತ್ ಶಿವನ ಆವಾಸ ಎಂಭ ಐತಿಹ್ಯವಿರುವ ಶ್ರೀ ಕ್ಷೇತ್ರದ ಸೂಗಲದ ಸೋಮೇಶ್ವರ ಧರ್ಶನ ಪಡೆಯಿವುದು ಸಂತೋಷಕರ. ಕರ್ನಾಟಕದ ಸುತ್ತಮುತ್ತಲಿನ ಜನರು 14 ಮತ್ತು 15ರಂದು ಜರಗುವ ಮಕರ ಸಂಕ್ರಾಂತಿಯ ದಿನದಂದು ಸೋಮೇಶ್ವರ ಆಶೀರ್ವಾದ ಪಡೆಯಲು ಮತ್ತು ಎಳ್ಳು ಎಣ್ಣೆ ಅರಿಶಿನದ ಸ್ನಾನ ಮಾಡಿ ಈ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಗುರೆಳ್ಳು ಚಟ್ನಿ, ಶೇಂಗಾ ಚೆಟ್ನಿ,

ಮಾದೂಲಿ, ಹುಳಿ ಬಾನನ್ನು ಸಾಮೂಹಿಕವಾಗಿ ಸಾಲುಗಟ್ಟಿ ಕುಳಿತುಕೊಂಡು ಸೇವಿಸುವುದರಿಂದ ತಮ್ಮ ಜೀವನ ಪಾವನ ಎಂದು ಭಾವಿಸುತ್ತಾರೆ. ಆದರೆ ಇಂದು ಈಗಿನ ಜಗತ್ತಿನಲ್ಲಿಯೂ ಕೂಡಾ ಈ ಕ್ಷೆತ್ರದಲ್ಲಿ ಎಲ್ಲಾ ಸಮಾಜದವರು ಅಣ್ಣ ತಮ್ಮಂದಿರಂತೆ ಪ್ರತಿ ಅಮವಾಸ್ಯೆ ಹುಣ್ಣಿಮೆ ಮತ್ತು ಜಾತ್ರೆಗಳಲ್ಲಿ ಸೇರುತ್ತಾರೆ. ಅದರಲ್ಲಿಯೂ ಮಕರ ಸಂಕ್ರಾಂತಿಯಂದು ಲಕ್ಷಾಂತರಗಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದ ಕಾರಣ ಉತ್ತರ ಕರ್ನಾಟಕದ ಎರಡನೇ ದಕ್ಷಿಣ ಕಾಶಿಯೆಂದೇ ಹೆಸರುವಾಸಿಯಾದ ಸೊಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ಷೇತ್ರಕ್ಕೆ ಬರುವ ವ್ಯವಸ್ಥೆ ಬೆಳಗಾವಿಯಿಂದ 60 ಕಿ.ಮಿ. ಯರಗಟ್ಟಿಯಿಂದ 20 ಕಿ.ಮಿ., ಮುನವಳ್ಳಿಯಿಂದ 25 ಕಿ.ಮಿ. ಬೈಲಹೊಂಗಲದಿAದ 16 ಕಿ.ಮಿ., ಮುರಗೋಡದಿಂದ 10ಕಿ.ಮೀ., ದೂರ ಕ್ರಮಿಸಬೇಕು ರಸ್ತೆ ಸಂಚಾರದ ಮೂಲಕ ಈ ಬೆರೆ ಗ್ರಾಮಗಳಿಂದ ವಿಶೇಷ ವಾಹನಗಳ ಸೌಕರ್ಯ ಹಾಗೂ ಸಾರಿಗೆ ವ್ಯವಸ್ತೆ ಮಾಡಲಾಗಿದೆ.
ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ಈ ಸಂಭ್ರಮದಲ್ಲಿ ಇಲ್ಲಿ ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿರುತ್ತದೆ.


ಸೊಗಲ ಶಿವಪಾರ್ವತಿಯರ ದೇವಸ್ಥಾನ ಒಂದು ಐತಿಹಾಸಿಕ ದೇವಸ್ಥಾನ ಇಲ್ಲಿ ಪಾರ್ವತಿ ಪರಮೇಶ್ವರ ಅಕ್ಷತಾರೋಪ ಕಾರ್ಯಕ್ರಮ ಹೋಳಿ ಹಬ್ಬದ ಮೊದಲನೆ ಸೋಮವಾರ ಜರುಗುವುದು. ಹಾಗೂ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸಾಹಸ್ರಾರು ಜನರು ಲ ಕರ್ನಾಟಕ ಸೇರಿದಂತೆ ಪಕ್ಕದ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂದ್ರಾ ರಾಜ್ಯಗಳಿಂದ ಸೇರುವುದರಿಂದ ಪೊಲೀಸ್ ಇಲಾಖೆಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಆಯ್. ಎಂ. ಮಠಪತಿ,
ಸಿಪಿಐ ಮುರಗೋಡ ಪೊಲೀಸ್ ಠಾಣೆ

Advertisement

Leave a reply

Your email address will not be published. Required fields are marked *

error: Content is protected !!