ಎಂಇಎಸ್ ಪುಂಡನ ಹೆಡೆಮುರಿ ಕಟ್ಟಲು ಬೆಳಗಾವಿ ಖಾಕಿ ಹಿಂದೇಟು…?
ಬೆಳಗಾವಿ : ಗಡಿ ಭಾಗದಲ್ಲಿ ನಿರಂತರ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಎಂಇಎಸ್ ಪುಂಡನ ಹೇಳೆಕಿಗೆ ಕನ್ನಡಿಗರು ಕೋಪಗೊಣಂಡಿದ್ದು ಎಂಇಎಸ್ ಪುಂಡನ ಹೆಡೆಮುರಿ ಕಟ್ಟಲು ಬೆಳಗಾವಿ ಖಾಕಿ ಏಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮೂಡುತ್ತಿದೆ.
ಎಂಇಎಸ್ ಮುಖಂಡ ಶುಭಂ ಶಳಕೆ ಮತ್ತೊಮ್ಮೆ ನಾಲಿಗೆ ಹರಿ ಬಿಟ್ಟಿದ್ದು ಕನ್ನಡಿಗರ ಕೈಯಿಂದ ಬೆಳಗಾವಿ ಮಹಾನಗರ ಪಾಲಿಕೆ ಮೆಲೇ ಭಗವಾ ಧ್ವಜ ಹಾರಾಡಿಸುತ್ತೇವೆ ಎಂಬ ಹೇಳಿಕೆ ಜೊತೆಗೆ ಕನ್ನಡಿಗರಿಗೆ ಅವಮಾನ ಮಾಡಿದ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://fb.watch/7I4x52mh9y/https://fb.watch/7I4x52mh9y/
ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೊಸ ನಾಟಕ ಪ್ರಾರಂಭಿಸಿರುವ ಎಂಇಎಸ್ ಭಾಷೆ ವಿಷ ಬೀಜ ಬಿತ್ತಿ ಮತಯಾಚನೆಯಲ್ಲಿ ತೊಡಗಿದೆ. ಜೊತೆಗೆ ಪದೇ ಪದೇ ಭಾಷಾ ವೈಷಮ್ಯ ಬಿತ್ತುತ್ತಿರುವ ಎಂಇಎಸ್ ಮುಖಂಡರಿಗೆ ಮೂಗುದಾರ ಹಾಕುವಲ್ಲಿ ಬೆಳಗಾವಿ ಪೊಲೀಸರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.
ಅಷ್ಟೇ ಅಲ್ಲದೆ ಮುಸ್ಲಿಮರ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡ ಎಂಇಎಸ್ ನ ಹೊಸ ಎಂ ಪ್ಲಸ್ ಎಂ ಸೂತ್ರವನ್ನು ವ್ಯಂಗ್ಯ ಮಾಡಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಪರೋಕ್ಷ ವಾಗ್ದಾಳಿಯನ್ನು ಎಂಇಎಸ್ ಮುಖಂಡ ಮಾಡಿದ್ದು, ವಿನಾಕಾರಣ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಮರಾಠಾ ಹೆಸರು ಪ್ರಸ್ತಾಪಿಸಿ ಜಾತಿ ವಿಷ ಬೀಜ ಬಿತ್ತುವ ಕೆಲಸ ನಡೆಸಿದ್ದಾನೆ.