
ಅಭಿವೃದ್ಧಿಗಾಗಿ ಆಮ್ ಆದ್ಮಿ ಬೆಂಬಲಿಸಿ : ಸುರೇಶ ರಾಥೋಡ

ಬೆಳಗಾವಿ : ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ. ದೆಹಲಿ ಯಾವ ರೀತಿ ಬದಲಾವಣೆ ಮಾಡಿದೆ. ಅದೇ ರೀತಿ ಬೆಳಗಾವಿಯಲ್ಲಿ ಬದಲಾವಣೆ ಮಾಡಲು ಪ್ರತಿಯೊಬ್ಬರು ಮತವನ್ನು ಹಾಕುವ ಮೂಲಕ ಅಮ್ ಆದ್ಮಿ ಪಕ್ಷದ ಶಕ್ತಿಯನ್ನು ಬೆಳಸಿ ಎಂದು ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ ರಾಥೋಡ ಅವರು ಮನವಿ ಮಾಡಿಕೊಂಡರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 27 ಅಭ್ಯರ್ಥಿಗಳನ್ನು ಆಮ್ ಆದ್ಮಿ ಪಕ್ಷದ ಕಣಕ್ಕಿಳಿಸಿದ್ದು, ರವಿವಾರ ವಾರ್ಡ್ ನಂಬರ್ 23ರ ಅಭ್ಯರ್ಥಿ ಪವನ್ ಮೋಟಗಿ ಅವರ ಬಿರುಸಿನ ಚುನಾವಣಾ ಪ್ರಚಾರಕ್ಕೆ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಉಪಾಧ್ಯಕ್ಷರಾದ ಸುರೇಶ್ ರಾಥೋಡ ಆಗಮಿಸಿ ಬೆಳಗಾವಿ ಚುನಾವಣೆಯ ವೀಕ್ಷಕರಾದ ಲಕ್ಷ್ಮಿಕಾಂತರಾವ್ ನೇತೃತ್ವದಲ್ಲಿ ಕೋರಿ ಗಲ್ಲಿ, ಬಸವನಗಲ್ಲಿ, ಜೇಡ ಗಲ್ಲಿ, ವಿಠ್ಠಲ ದೇವ ಗಲ್ಲಿ, ಶಹಾಪೂರ ಸೇರಿದಂತೆ ವಿವಿಧ ಗಲ್ಲಿಗಳಲ್ಲಿ ಘೋಷಣೆ ಹಾಕುತ್ತಾ ಬಿರುಸಿನ ಪ್ರಚಾರ ಕೈಗೊಂಡರು.
ಈ ವೇಳೆ ಬೆಂಗಳೂರಿನ ಘಟಕದ ಉಪಾಧ್ಯಕ್ಷ ಸುರೇಶ ಅವರು ಮಾಧ್ಯಮದರೊಂದಿಗೆ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಮ್ಮ ಪಕ್ಷದ ಮೂಲ ಉದ್ದೇಶ ಏನೆಂದರೆ ಎಲ್ಲಿ ಜನರು ಮೂಲಭೂತ ಸೌಲಭ್ಯಗಳಿಂದ ಪರದಾಡುತ್ತಿರುತ್ತಾರೆ ಅಂತಹ ಕಡೆ ಆಮ್ ಆದ್ಮಿ ತುಂಬ ಕಳಕಳಿಯಿಂದ ಕಾನೂನುಬದ್ಧವಾಗಿ ಚುನಾವಣೆ ನಡೆಸಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವರಿಗೆ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಉಚಿತವಾಗಿ ಕೊಡುವ ಕೆಲಸ ಮಾಡಲು ಆಮ್ ಆದ್ಮಿ ಪಕ್ಷ ಬೆಳಗಾವಿಯಲ್ಲಿ ಚುನಾವಣೆ ನಡೆಸಿದ್ದೇವೆ. ನಮ್ಮ ಪಕ್ಷ ಮುಖ್ಯ ಉದ್ದೇಶವೆನೆಂದರೆ ದೆಹಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಲಾಗಿದೆ, ಅದೇ ರೀತಿ ಬೆಳಗಾವಿಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಬಳಿಕ ಮಾತನಾಡಿದ ವಾರ್ಡ ನಂ 23 ಅಭ್ಯರ್ಥಿ ಪವನ ಮೋಟಗಿ ಅವರು, ನಮ್ಮ ಉದ್ದೇಶ ಏಕೆಂದರೆ ಬೆಳಗಾವಿಯಲ್ಲಿ ಏನು ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು, ಭ್ರಷ್ಟಾಚಾರ ಮಾಡದೇ ದೆಹಲಿಯಲ್ಲಿ ಒಳ್ಳೆಯ ಆಡಳಿತ ನಡೆಸಿದ ಕೇಜ್ರಿವಾಲ್ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಅದೇ ರೀತಿ ಭ್ರಷ್ಟಾಚಾರಕ್ಕೆ ತಡೆ ಒಡ್ಡಿ ಬೆಳಗಾವಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಜನರು 15 ವರ್ಷದಿಂದ ಜಾತಿ ರಾಜಕಾರಣ ಬೇಸತ್ತು ಒಳ್ಳೆಯ ಅಭಿವೃದ್ಧಿ ರಾಜಕಾರಣ ಬಯಸುತ್ತಿದ್ದಾರೆ. ಅಂತಹ ಒಳ್ಳೆಯ ಅಭಿವೃದ್ಧಿ ರಾಜಕಾರಣ ನಮ್ಮ ಪಕ್ಷ ವಾರ್ಡ 23 ರಲ್ಲಿ ಮಾಡಿ ತೋರಿಸುತ್ತದೆ ಎಂದರು.
ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮೋಹನ ಘಾಟಗೆ ಅವರು, ಇಷ್ಟು ದಿನ ಬೆಳಗಾವಿ ಧರ್ಮ, ಜಾತಿ, ಭಾಷೆಯ ರಾಜಕಾರಣ ಮಾಡುತ್ತಾ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತ ಮಾಡಿಬಿಟ್ಟಿದ್ದಾರೆ. ಇವತ್ತು ಆಮ್ ಆದ್ಮಿ ಪಕ್ಷ ಬೆಳಗಾವಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸಿದಾಗ ಬಿಜೆಪಿಯರು ಬೆಚ್ಚಿಬಿದ್ದರು. ಆದರೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಯಾವ ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ಬದಲಾವಣೆ ಮಾಡಿದೆ ಅದೇ ರೀತಿ ಬೆಳಗಾವಿ ಮಹಾನಗರದಲ್ಲಿಯೂ ಮಾಡಬೇಕಾಗಿದೆ. ಆಮ್ ಅದ್ಮಿ ಪಕ್ಷದ ವತಿಯಿಂದ ನಿಂತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ರೀತಿಯ ಜನರು ಆಶೀರ್ವಾದ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಖಚಿತ ಎಂದು ಹೇಳಿದರು.
ಮನೆ ಮನೆ ಪ್ರಚಾರದಲ್ಲಿ ವಿಜಯ ಪಾಟೀಲ, ಅನೀಶ ಸೌದಗಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.