ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಸಂಸ್ಕಾರ
ಅಥಣಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವಗಳದಿಗೆ ಸ್ವ ಗ್ರಾಮದಲ್ಲಿ ನಡೆಯಿತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಯೋಧ ಲಕ್ಷ್ಮಣ ಘೋರ್ಪಡೆ ರಜೆ ಹಿನ್ನಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ್ದರು. ಅವರು 15ನೇ ಮರಾಠಾ ಕೇರ್ 99 ಎಪಿಓ ಅರುಣಾಚಲ ಪ್ರದೇಶದಲ್ಲಿ ಲೂಂಪು ಘಟಕದಲ್ಲಿ ಸೈನಿಕ ಸೇವೆ ಸಲ್ಲಿಸುತ್ತಿದ್ದರು.
ಯೋಧ ಲಕ್ಷ್ಮಣ ಹಾಗೂ ಆತನ ಸಹೋದರ ಸಂಬಂಧಿ ಸೈನಿಕ ಸತೀಶ್ ಇಬ್ಬರು ಹಾರೂಗೇರಿ ಗ್ರಾಮಕ್ಕೆ ಹೋಗಿ ಸ್ವಗ್ರಾಮಕ್ಕೆ ಬರುವಾಗ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಲಕ್ಷ್ಮಣ ಘೋರ್ಪಡೆ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಸತೀಶ ಸಂಪತ ಘೊರ್ಪಡೆ ಗಂಭೀರವಾಗಿ ಗಾಯಗೊಂಡಿದ್ದು ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.
ಮೃತಪಟ್ಟ ಯೋಧ ಲಕ್ಷ್ಮಣ ಅವರ ಮೃತ ದೇಹವನ್ನು ದರೂರದಿಂದ ನದಿ ಇಂಗಳಗಾಂವ ಗ್ರಾಮಕ್ಕೆ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಿ ಸ್ವ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.