
ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ವಿಜಯೇಂದ್ರಗೆ ಬಿಜೆಪಿ ಶಾಕ್..?

ಬೆಂಗಳೂರು : ವಿಧಾನ ಪರಿಷತ್ ಮೂಲಕ ಸಚಿವ ಸಂಪುಟ ಸೇರಲು ಇಚ್ಛಿಸಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಗ ಬಿ ವೈ ಜಿಜಯೇಂದ್ರ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮೂಲಗಳ ಪ್ರಕಾರ ಕುಟುಂಬ ರಾಜಕಾರಣ ಪಕ್ಷ ವಿರೋಧಿಸಿರುವ ಹಿನ್ನಲೆಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ ಎಂದು ಕೇಳಿಬರುತ್ತಿದೆ. ಆದರೆ ಖುದ್ದು ವಿಜಯೇಂದ್ರ ಹೆಸರನ್ನು ಬಿಎಸ್ವೈ ನಿರ್ದೇಶನ ಮಾಡಿದ್ದರು. ಆದರು ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಟಿಕೆಟ್ ಘೋಷಣೆ : ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ್ದು ಸಿದ್ದು ಹಾಗೂ ಡಿಕೆಶಿಗೆ ಹೈಕಮಾಂಡ್ ಶಾಕ್ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಕೆಪಿಸಿಸಿ ವಕ್ತಾರ ಎಂ. ನಾಗರಾಜು ಯಾದವ್ ಹಾಗೂ ಕೆ. ಅಬ್ದುಲ್ ಜಬ್ಬಾರ್ ಗೆ ಟಿಕೆಟ್ ಘೋಷಣೆ ಮಾಡಿದೆ.