
ಅಥಣಿ : ಭೀಕರ ರಸ್ತೆ ಅಪಘಾತ ; ಓರ್ವ ಸಾವು

ಅಥಣಿ : ಪಟ್ಟಣದ ಸಾಯಿ ಮಂದಿರ ಹತ್ತಿರ ಅಥಣಿ ಜಮಖಂಡಿ ರಸ್ತೆಯಲ್ಲಿ ಟಾಟಾ ಮೋಟರ್ ಹಾಗೂ ಬೈಕ ನಡುವೆ ಮುಖಾ-ಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಹಣಮಂತ ಸಿದ್ದಪ್ಪ ನಾವಿ( 42 ) ಮೃತ ದುರ್ದೈವಿಯಾಗಿದ್ದಾನೆ. ವ್ಯಕ್ತಿಯು ಬೈಕ್ ಮೇಲೆ ತನ್ನ ಪತ್ನಿಯೊಂದಿಗೆ ಪಿ.ಕೆ ನಾಗನೂರ ಗ್ರಾಮಕ್ಕೆ ತೆರಳುವಾಗ ಟಾಟಾ ಎಸಿ ಚಾಲಕನ ಅಚಾತುರ್ಯದಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಭಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.