Select Page

ಹಣಕ್ಕಾಗಿ ಅಂಬಾನಿ ಮಗನ ಕೈ ಹಿಡಿದವರಲ್ಲ ರಾಧಿಕಾ ; ಇವರದ್ದು ಎಂತಾ ಪ್ರೇಮ ಗೊತ್ತಾ..?

ಹಣಕ್ಕಾಗಿ ಅಂಬಾನಿ ಮಗನ ಕೈ ಹಿಡಿದವರಲ್ಲ ರಾಧಿಕಾ ; ಇವರದ್ದು ಎಂತಾ ಪ್ರೇಮ ಗೊತ್ತಾ..?

“ವಿರೇನ್ ಮರ್ಚೆಂಟ್ ಮಗಳು ರಾಧಿಕಾ ಮರ್ಚೆಂಟ್. ಅಂಬಾನಿ ಅಷ್ಟು ಅಲ್ಲದಿದ್ದರೂ ಸಾಕಷ್ಟು ಸಿರಿವಂತ ಕುಟುಂಬ. ಅಪ್ಪ ದೊಡ್ಡ Buisness man. ಅಮೇರಿಕಾದ ಯೂನಿವರ್ಸಿಟಿಯಿಂದ Political Science ಪದವಿ ಪಡೆದಾಕೆ. ಅವಳು ತುಂಬಾ ಬುಧ್ಧಿವಂತೆ, ವಿನಯವಂತೆ,  ಸುಂದರಿ ಮೂರೂ ಗುಣಗಳು ಅಪರೂಪವಾಗಿ ಸಲ್ಲುವ ಹೆಣ್ಣುಮಗಳು.

ಈಕೆಯ ಬಗ್ಗೆ ನಾನು ಮೊದಲ ಓದಲು ಶುರು ಮಾಡಿದ್ದು, ಆಕೆ ತನ್ನ ತಂಡದ ಜೊತೆ ಸೇರಿ  Fly over ಗಳ ಪೇಂಟಿಂಗ್ ಮಾಡಲು ಶುರು ಮಾಡಿದಾಗ. ನಂತರದ ದಿನಗಳಲ್ಲಿ ತಿಳಿದಿದ್ದು ಈಕೆ ಮುಖೇಶ್ ಅಂಬಾನಿ ಅವರ ಕಿರಿಯ ಮಗನನ್ನು ಮದುವೆ ಆಗುತ್ತಾಳೆ ಎಂದು.
           
ಒಂದು ವರ್ಷದಿಂದ ಅವರ ಮದುವೆ ಕಲಾಪಗಳ ಬಗ್ಗೆ ಸುದ್ದಿಯಾದಾಗ ಎಲ್ಲದರಕ್ಕಿಂತ ಹೆಚ್ಚು ಟ್ರೋಲ್ ಆಗಿದ್ದು ಈಕೆ. ರಾಧಿಕಾಳ ಯಾವುದೋ Middle Class ಲೇಡಿ ಎಂದು ತಿಳಿದು ಆಕೆ ದುಡ್ಡಿಗಾಗಿ ಅನಂತರನ್ನ ಮದುವೆ ಆಗ್ತಾ ಇದ್ದಾಳೆ ಎಂಬಲ್ಲಿಂದ ಹಿಡಿದು ಅವರ ಅತೀ ವೈಯಕ್ತಿಕ ವಿಷಯವಾದ, ಮಕ್ಕಳು ಹೇಗೆ ಆಗುತ್ತಾರೆ ಎಂಬ ಕೆಟ್ಟ ವ್ಯಂಗ್ಯದವರೆಗೆ.‌‌

Infact ,ಅವಳು ಒಂದು Middle Class ಲೇಡಿ ಆಗಿದ್ದರೂ, ಅನಂತ್ ಅವಳನ್ನು ಮದುವೆಗೆ ಆರಿಸಿದ್ದರೂ, ಅಥವಾ ಈಕೆಯೇ ದುಡ್ಡಿಗೆ ಅಂತಲೇ ಒಕೆ ಅಂದಿದ್ದರೂ It’s none of our business. ವಿಷಯ ಹಾಗಿಲ್ಲ.
                 
ನೂರು ಕೇಜಿಗೂ ಜಾಸ್ತಿ ತೂಗುವ ತನ್ನ ಶರೀರ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೇ ನಡೆಯುವ ಅನಂತ್ ಜೊತೆಗೆ ಮುದ್ದಾಗಿ ಆತನ ಕೈ ಹಿಡಿದು ನಡೆದು ಬರುವ ರಾಧಿಕಾ ನನಗೆ ಆತನಲ್ಲಿ ಅಪ್ರತಿಮ ಪ್ರೇಮ ಕಂಡ ದೇವತೆಯಂತೆ ಕಾಣುತ್ತಾಳೆ. ಏಳೆಂಟು ವರ್ಷಗಳ ಪರಿಚಯ.

ಆತನ ಆರೋಗ್ಯ ಸಮಸ್ಯೆಗಳ ಜೊತೆಗೆ ಪಾಟಿ ಸವಾಲಿಗೆ ಜೊತೆಯಾದವಳು. ಏನೇ ಬಂದರೂ ಜೊತೆಯಲ್ಲಿ ಇರುವೆ ಎಂದೇ ಬಂದವಳು. ಆಕೆ ಬೇಕಿದ್ದರೆ ಇನ್ನೊಂದಿಷ್ಟು Businesses ಕುಟುಂಬದ ಹುಡುಗರ ಆಯ್ಕೆ ಮಾಡಬಹುದಿತ್ತು. Smart , Handsome bla bla ಎಂದು ಹೇಳಬಹುದಿತ್ತು.

ಆಕೆಯೂ ಕೋಟಿಗಳ ಒಡತಿ. ಆದರೆ ಅವಳು ಅಪೂರ್ವ ಹುಡುಗಿ. ಪೂರ್ಣ ಅಂಬಾನಿ ಕುಟುಂಬದಂತೆ ದೈವಭಕ್ತೆ. ರಾಮ ಮಂದಿರ ಪ್ರತಿಷ್ಟಾಪನೆ ನೋಡುವ ಭಾಗ್ಯ ನನ್ನ ಪೂರ್ವಜನ್ಮದ ಸುಕೃತ ಎಂದು ಹೇಳಿದಳು. ಹತ್ತು ಸಾವಿರ ಸಂಪಾದಿಸಿ ನೆಲ ಕಾಣದಂತೆ ಸೊಕ್ಕು ಮಾಡುವ ಒಂದಿಷ್ಟು ಹುಡುಗಿಯರ ನೋಡಿ ,ಒಮ್ಮೆ ರಾಧಿಕಾಳ ನೋಡಿ.

You will know it ರಾಧಿಕಾ ಬಗ್ಗೆ ಅದೆಷ್ಟು ಆಸ್ಥೆ ,ಪ್ರೇಮ ಆತನಿಗೆ. ಅನೇಕ ಬಾರಿ ಹೇಳಿಕೊಂಡಿದ್ದಾರೆ..ತನ್ನ ಕೈ ಬಿಡದೇ ಸಲಹಿದ್ದಾಳೆ ಎಂದು ಹೇಳಿದ್ದಾರೆ..ಇಂತಹ ಹೆಣ್ಣಿನ ಬಗ್ಗೆ ಅತೀ ಅಸಹ್ಯವಾಗಿ ಬರೆಯುವವರು ನನಗೆ ಹುಳಿದ್ರಾಕ್ಷಿ ಯಂತೆ ಕಾಣುತ್ತಾರೆ.

ದುಡ್ಡು ಎಲ್ಲರಿಗೂ ಬೇಕು. ಅದಿಲ್ಲದೆ ಜೀವನ ಖಂಡಿತಾ ಸಾಧ್ಯ ಇಲ್ಲ..ಆದರೆ ಇರುವ ದುಡ್ಡು ಅನುಭವಿಸಲು, ಸುಖವಾಗಿ ಇರಲು, ಕಷ್ಟಕ್ಕೆ ಜೊತೆಗೆ ನಿಲ್ಲಲು ಒಳ್ಳೆಯ ಸಂಗಾತಿ ಅವಶ್ಯ.. ಅದು ಹೆಣ್ಣು ಮತ್ತು ಗಂಡು ಇಬ್ಬರೂ ಅನ್ವಯ.

ಅನಂತ್ ಅದರ ಪಡೆದುಕೊಂಡಿದ್ದಾರೆ. ನಮ್ಮ ದೇಶದ ಹೆಮ್ಮೆಯ ಸಂಸ್ಥೆಯನ್ನು ಮುಂದೆ ಅಣ್ಣ ತಮ್ಮ ಹೊರಲಿಕ್ಕಿದೆ.‌ ಬೆಳೆಸಲಿಕ್ಕಿದೆ. ಸಧ್ಯವಾದರೆ ಒಳ್ಳೆಯದು ಹಾರೈಸೋಣ.‌ಇಲ್ಲದಿದ್ದರೆ ಸುಮ್ಮನೇ ಇರೋಣ. ಶುಭಾಶಯಗಳು ಅನಂತ್ -ರಾಧಿಕಾ

ಬರಹದ ಮೂಲ – ಸೋಶಿಯಲ್ ಮೀಡಿಯಾ

Anil Ambani, Nitu ambani, Ananth & Radhika Radhika Merchant

Advertisement

Leave a reply

Your email address will not be published. Required fields are marked *