Select Page

ಎಬಿವಿಪಿ ವತಿಯಿಂದ ಬಲಿದಾನ್ ದಿವಸ್ ಆಚರಣೆ

ಎಬಿವಿಪಿ ವತಿಯಿಂದ ಬಲಿದಾನ್ ದಿವಸ್ ಆಚರಣೆ

ಬೆಳಗಾವಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಬೆಳಗಾವಿ ವತಿಯಿಂದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನ್ ದಿವಸ್ ಪ್ರಯುಕ್ತ 13 ನೇ ರಂಗ ದೇ ಬಸಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುರುವಾರ ನಗರದ ತಿಲಕವಾಡಿಯ ಐಎಂಇಆರ್ ಕಾಲೇಜಿನಲ್ಲಿ 13ನೇ ರಂಗ ದೇ ಬಸಂತಿ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಕಿರಣ ರಾಮ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು. ಸಣ್ಣ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ್ದರ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಪ್ರೇರಣೆಯಾಯಿತು ಎಂದರು.

ಎಬಿವಿಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್ ಮಾತನಾಡಿ. ದೇಶದ ಶಕ್ತಿ ಎಂದರೆ ಯುವಕರು ಮತ್ತು ವಿದ್ಯಾರ್ಥಿಗಳು. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಮೂಡಿಸುವ ಕೆಲಸ ಎಬಿವಿಪಿ ಕಳೆದ ಏಳು ದಶಕಗಳಿಂದ ಮಾಡುತ್ತಾ ಬಂದಿದೆ ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಉದ್ಯಮಿಗಳಾರ ಸಚಿನ್ ಸಬ್ನಿಸ ರವರಿಗೆ ಸನ್ಮಾನಿಸಲಾಯಿತು. ನಂತರ ದೇಶ ಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಉಪಾಧ್ಯಕ್ಷ ವಿನಾಯಕ ಸಿಂಗ್ ರಜಪೂತ, ವಿಭಾಗ ಪ್ರಮುಖರಾದ ಡಾ. ಎಚ್ ಎಮ್ ಚನ್ನಪ್ಪಗೋಳ, ಡಾ.ಆನಂದ ಹೊಸೂರು, ಪ್ರವೀಣ್ ಪ್ಯಾಟೆ, ಪ್ರಕಾಶ್ ಕಮತೆ,ರಾಜು ಅಂಗಡಿ, ರೋಹಿತ್ ಉಮನಾಬಾದಿಮಠ ನಗರ ಕಾರ್ಯದರ್ಶಿ ಪ್ರೀತಮ್ ಉಪ್ಪರಿ‌ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!