
ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಸ್ಥಾನ ಅನರ್ಹತೆಗೆ ಇದು ನಿಜವಾದ ಕಾರಣ – ತಪ್ಪದೇ ತಿಳಿದುಕೊಳ್ಳಿ

ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದ್ದು, ‘ಪ್ರಧಾನಿ ನರೇಂದ್ರ ಮೋದಿ’ಗೆ ಬೈದಿದ್ದಕ್ಕಾಗಿ ಅಲ್ಲ. ಬದಲಿಗೆ ‘ಮೋದಿ’ ಎಂಬ ಅಡ್ಡ ಹೆಸರಿರುವ ಎಲ್ಲರನ್ನೂ ಸೇರಿಸಿ ಬೈದಿದ್ದಕ್ಕಾಗಿ.
ರಾಹುಲ್ ಗಾಂಧಿ ಹೇಳಿದ್ದು “ಈ ಕಳ್ಳರಿಗೆಲ್ಲ ಯಾಕೆ ಮೋದಿ ಎಂಬ ಅಡ್ಡ ಹೆಸರೇ ಇರುತ್ತದೆ?” ಎಂದು. ಅಂದರೆ, ಮೋದಿ ಎಂಬ ಅಡ್ಡ ಹೆಸರಿರುವವರೆಲ್ಲ ಕಳ್ಳರು ಎಂದು ಅರ್ಥ ಬರುತ್ತದೆ.
ಹೀಗಾಗಿ ಮೋದಿ ಎಂಬ ಅಡ್ಡ ಹೆಸರಿರುವ ಬಿಜೆಪಿ ಶಾಸಕ, ವಕೀಲರೂ ಆಗಿರುವ ಪೂರ್ಣೇಶ್ ಮೋದಿ ಎಂಬುವವರು “ತಮ್ಮ ಸಮುದಾಯಕ್ಕೆ ಅವಮಾನವಾಗಿದೆ” ಎಂದು ಕೋರ್ಟಿಗೆ ಹೋಗಿದ್ದರು.
ನೇರವಾಗಿ ಬೈಯಿಸಿಕೊಂಡಿದ್ದ ಮೋದಿ ಈ ಪ್ರಕರಣದಲ್ಲಿ ಕೋರ್ಟಿಗೆ ಹೋಗಿರಲಿಲ್ಲ.
“ಒಬ್ಬ ವ್ಯಕ್ತಿಗೆ ಬೈದಿದ್ದಕ್ಕಾಗಿ ವಿಪಕ್ಷ ನಾಯಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದರು” ಎಂದೋ “ಮೋದಿ ತನಗೆ ಬೈದವರನ್ನೆಲ್ಲ ಜೈಲಿಗೆ ಹಾಕಿಸುತ್ತಾನೆ” ಎಂದು ಜರೆಯುವವರ ಮಾತಿಗೆ “ಹೌದು” ಎಂದು ಅನಿಸುವುದಕ್ಕೂ ಮೊದಲು ನೆನಪಿಡಬೇಕಾದ ಸಂಗತಿ ಇದು.