Select Page

ಬೆಳ್ಳಂಬೆಳಿಗ್ಗೆ ಕಾರ್ಮಿಕ ಸಚಿವರ ಜಾಗಿಂಗ್

ಬೆಳ್ಳಂಬೆಳಿಗ್ಗೆ ಕಾರ್ಮಿಕ ಸಚಿವರ ಜಾಗಿಂಗ್

ಜಗತ್ತಿನಲ್ಲಿ ಸದೃಢ ದೇಹ ಹಾಗೂ ಆರೋಗ್ಯಕರ ಮನಸ್ಥಿತಿ ಹೊಂದುವುದು ಬಹಳ ಮುಖ್ಯ. ತಮ್ಮ 47ನೇ ವಯಸ್ಸಿನಲ್ಲಿ ಕೂಡ ಯುವಕರನ್ನ ನಾಚಿಸುವ ಹಾಗೆ ತನ್ನ ದೇಹವನ್ನು ದಂಡಿಸುವ ಹಾಗೂ ಸದೃಢ ಆರೋಗ್ಯ ಕಾಪಾಡಿಕೊಂಡಿರುವ ಫಿಟ್ಟೆಸ್ಟ್ ಮಿನಿಸ್ಟರ್ ಎಂಬ ಹೆಗ್ಗಳಿಕೆ ಇರೋದು ಯಾರಿಗೆ ಗೊತ್ತಾ?

ಅದುವೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಕಾರ್ಮಿಕ ಸಚಿವ ಸಂತೋಷ್ ಲಾಡ್. ಉದಾಹರಣೆಗೆ ಈ ಎಕ್ಸ್ ಕ್ಲೂಸಿವ್ ದೃಶ್ಯಗಳನ್ನ ನೀವೇ ನೋಡಿ ನಿಮಗೆ ತಿಳಿಯುತ್ತದೆ.

ಇಂದು ಧಾರವಾಡಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಬೆಳ್ಳಂಬೆಳಗ್ಗೆ ಧಾರವಾಡದ ಬೀದಿಗಳಲ್ಲಿ ರನ್ನಿಂಗ್ ಮಾಡುತ್ತಿರುವ ದೃಶ್ಯ ಬಹಳ ವೈರಲ್ ಆಗಿದೆ.

ಸಂತೋಷ್ ಲಾಡ್ ಅವರು ಮೊದಲಿಂದಲೂ ಫಿಟ್ನೆಸ್ ವಿಷಯದಲ್ಲಿ ಶಿಸ್ತು ಪಾಲಿಸುತ್ತ ಬಂದಿದ್ದಾರೆ‌.

ತಮ್ಮ ಬಿಡುವಿಲ್ಲದ ಕೆಲಸದ ಸಮಯದಲ್ಲಿಯೂ ಕೂಡಾ ಸಂತೋಷ್ ಲಾಡ್ ಅವರು ಫಿಟ್ ಆಗಿರಲು ದಿನವೂ ಕೂಡ ವಾಕಿಂಗ್ ಹಾಗೂ ರನ್ನಿಂಗ್ ಅಷ್ಟೇ ಅಲ್ಲದೇ ಜಿಮ್ ನಲ್ಲಿ ಸಮಯವನ್ನ ಕಳೆಯುತ್ತಾರೆ.

ನಿಯಮಿತವಾದ ಸಮಯವನ್ನು ಜಿಮ್ ನಲ್ಲಿ ಕಳೆಯಬೇಕು ಹಾಗೂ ಯುವಕರು ಉತ್ಸಾಹಿಗಳಾಗಿ ಕಾರ್ಯವನ್ನು ಮಾಡಲಿಕ್ಕೆ ಹಾಗೂ ಫಿಟ್ ಇರಲು ಅತ್ಯಂತ ಉತ್ತಮ‌ ಹವ್ಯಾಸ ಎನ್ನುವುದು ಸಂತೋಷ್ ಲಾಡ್ ಅಭಿಪ್ರಾಯ.

Advertisement

Leave a reply

Your email address will not be published. Required fields are marked *

error: Content is protected !!