ಬೆಳಗಾವಿ : ಈಚೆಗೆ ಪಾಂಡಿಚೇರಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಕೇಂದ್ರೀಯ ಸಂಘದ 55 ನೇ ಸ್ಪೀಡ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಇಲ್ಲಿನ ಕೇಂದ್ರೀಯ ವಿದ್ಯಾಲಯ ನಂ 2 ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕುಲದೀಪ ಲಕ್ಷ್ಮಣ ಬಿರ್ಜೆ 1000 ಮೀ. ರಿಂಕ್ ಓಟದಲ್ಲಿ ಚಿನ್ನದ ಪದಕ ಹಾಗೂ 2000 ಮೀ ರಿಂಕ್ ಓಟದಲ್ಲಿ ಬೆಳ್ಳಿ ಪದಕ ಜಯಸಿದ್ದಾರೆ. ಇವರಿಗೆ ಸೂರ್ಯಕಾಂತ ಹಿಂಡಲ್ಗೇಕರ, ವಿಠ್ಠಲ್, ಸೋಹಮ್ ಹಿಂಡಲ್ಗೇಕರ ಯೋಗೇಶ ಕುಲಕರ್ಣಿ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಯ ಸಾಧನೆಗೆ ಕೇಂದ್ರೀಯ ವಿದ್ಯಾಲಯ ವಿದ್ಯಾಲಯ ಪ್ರಾಂಶುಪಾಲ ಮಹೇಂದ್ರ ಕಲ್ರಾ, ದೈಹಿಕ ಶಿಕ್ಷಕ ಅವಿನಾಶಕುಮಾರ ಸಿಂಗ್, ಮೋಹನ ಗವಾಡೆ, ಪೂಜಾ ಮುಚ್ಚಂಡಿ ಸೇರಿದಂತೆ ವಿದ್ಯಾಲಯ ಭೋದಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.




