ಬೆಳಗಾವಿ : ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಹೆಸ್ಕಾಂ ಅಥಣಿ ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ವ್ಹಿ ಸಂಪಣ್ಣವರ ಅವರಿಗೆ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣನ್ಯೂಸ್ ವತಿಯಿಂದ ಶನಿವಾರ ಬೆಂಗಳೂರಿನ ತಾಜ್ ಯುಶವಂತಪುರದಲ್ಲಿ ನಡೆದ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‌ಪ್ರಶಸ್ತಿ ನೀಡಲಾಯಿತು.

ಹೆಸ್ಕಾಂ ಅಥಣಿ ವಿಭಾಗದ ಕಾರ್ಯಪಾಲಕ ಅಭಿಯಂತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುರಾಜ ಸಂಪಣ್ಣವರ ಅವರು ತಮ್ಮ ತಾಂತ್ರಿಕ ಕೌಶಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸ ಕಾರ್ಯಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದ ಕಾರಣಕ್ಕಾಗಿ ಇವರಿಗೆ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಸಂದಿದೆ.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಖ್ಯಾತ ನಟಿ ತಾರಾ, ಪರಿಶಿಷ್ಟ ವರ್ಗಗಳ ಇಲಾಖೆ ಸಚಿವ ಟಿ. ರುಘುಮೂರ್ತಿ ಅವರಿಂದ ಗುರುರಾಜ ಸಂಪಣ್ಣವರ ಅವರು ಕುಟುಂಬ ಸಮೇತರಾಗಿ ಪ್ರಶಸ್ತಿ ‌ಸ್ವೀಕರಿಸಿದರು. ಈ ವೇಳೆ ಪತ್ರಕರ್ತರಾದ ರವಿ ಹೆಗಡೆ ಹಾಗೂ ಜೋಗಿ ಉಪಸ್ಥಿತರಿದ್ದರು.