ಬೆಳಗಾವಿ : ಬಿಡಿಸಿಸಿ ಬ್ಯಾಂಕಿಗೆ ಸರಕಾರದಿಂದ ನಾಮನಿರ್ದೇಶನಗೊಂಡಿದ್ದ ಮೂವರು ನಿರ್ದೇಶಕರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ.

ಹೌದು ಕಳೆದ ಸಪ್ಟೆಂಬರ್ ನಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿತ್ತು.‌ ಆದರೆ ಹೈ ಕೋರ್ಟ್ ಈ ತಿದ್ದುಪಡಿಗೆ ತಡೆಯಾಜ್ಞೆ ನೀಡಿದೆ.

ಬಿಡಿಸಿಸಿ ಬ್ಯಾಂಕ್ ಗೆ ಸರಕಾರದಿಂದ ನಾಮನಿರ್ದೇಶನ ಗೊಂಡಿದ್ದ ಸುನೀತಾ ಐಹೊಳೆ, ಸುರೇಶ್ ಇಟಗಿ, ಬಾಳೇಶ ದಾಸನಟ್ಟಿ ಈ ಮೂವರು ನಿರ್ದೇಶಕರ ನಾಮನಿರ್ದೇಶ ರದ್ದುಗೊಂಡಿದೆ.