ಯುದ್ಧ ಆರಂಭ ; ತಡರಾತ್ರಿ ಪಾಕಿಸ್ತಾನದ ಬುಡ ಸುಟ್ಟ ಭಾರತ ಸೇನೆ
ನವದೆಹಲಿ : ಆಪರೇಷನ್ ಸಿಂಧೂರ್ ಹೆಸರಲ್ಲಿ ಭಾರತೀಯ ಸೇನೆ ದಾಳಿ ಪ್ರಾರಂಭಿಸಿದ್ದು ಮಧ್ಯರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ.
ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು ಈ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರು ಸಾವಣಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತದ ನಿಖರ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದ್ದು, ಸೇನೆಯ ಜೊತೆ ದೇಶದ ಜನ ನಿಂತಿದ್ದಾರೆ.


